ಬದ್ರ್ ಭೂಮಿಯಲ್ಲಿ ಮೊಳಗಿದ ತಕ್ಬೀರ್ ಧ್ವನಿ..
ಅಂದು ಹಿಜರಾ 2 ರ ರಮಳಾನ್ 17 ನೇ ದಿನ.. ಇಡೀ ಮದೀನಾ ದೇಶವು ಒಂದು ಕ್ಷಣ ಸ್ತಬ್ಧಗೊಂಡ ದಿನ.. ಮಕ್ಕಾ-ಮದೀನಾದ ಮುಸ್ಲಿಮರೆಲ್ಲರ ಕರಗಳು ಅಲ್ಲಾಹನೆಡೆಗೆ ಚಾಚಿತ್ತು.. ಬದ್ರಿನ ರಣಾಂಗಣದಲ್ಲಿ ನೆಬಿ(ಸ.ಅ)ಸೈನ್ಯ ಮತ್ತು ಅಬೂಜಹಲ್ ಸೈನ್ಯದ ನಡುವಿನ ಹೋರಾಟಕ್ಕೆ ಕ್ಷಣಗಣನೆ ಆರಂಭವಾಗಿತ್ತು.. ಪರಿಶುದ್ಧ ಇಸ್ಲಾಮನ್ನು ಉಳಿಸಲು ಮತ್ತು ಬೆಳೆಸಲು, ಇಸ್ಲಾಮಿನ ಆಶಯಗಳನ್ನು ಮುಕ್ತವಾಗಿ ಪಸರಿಸಲು ಅಲ್ಲಿ ಅಬೂಜಹಲ್ ನ ಗೋಡೆಯೊಂದು ಅಡ್ಡಗೊಂಡಾಗ, ಅಲ್ಲಾಹುವಿನ ಆಜ್ಞೆಯಂತೆಯೇ ಈ ಒಂದು ಯುದ್ಧವು ಅನಿವಾರ್ಯವಾಗಿತ್ತು. ಮಕ್ಕಾದಲ್ಲಿ ಇಸ್ಲಾಮಿನ ಪ್ರಬೋಧನೆಯಲ್ಲಿದ್ದ ಮುಹಮ್ಮದ್ ನೆಬಿ(ಸ.ಅ) ಮತ್ತು ಸ್ವಹಾಬಿಗಳನ್ನು ಮಕ್ಕಾದ ಖುರೈಷೀ ಮುಶ್ರಿಕ್ ಗಳು ಘೋರವಾಗಿ ಕಾಡಿಸಿ, ಪೀಡಿಸಿ, ಮಕ್ಕಾದಲ್ಲಿ ನೆಲೆಸಲು ಅನುಮತಿಯನ್ನು ನೀಡದೇ ಇದ್ದಾಗ ಮಕ್ಕಾದ ಕಡೆಗೆ ಮುಖಮಾಡಿ ಬಂದು ನೆಲೆಸಿ, ಅಲ್ಲಿಯೂ ಇಸ್ಲಾಮನ್ನು ಪ್ರಚುರಪಡಿಸಲು ಮುಂದಾದಾಗ ಮದೀನಾದ ಮುಶ್ರಿಕರ ನೇತಾರ ಅಬೂಜಹಲ್ ಕುಪಿತನಾಗಿ ಈ ಯುದ್ಧಕ್ಕೆ ತಯಾರಿಯಾಗುತ್ತಾನೆ..
ಅಲ್ಲಾಹುವಿನ ಕಡೆಯಿಂದ ನುಬುವ್ವತ್ ದೊರಕಲ್ಪಟ್ಟು, ಪರಿಶುದ್ಧ ಇಸ್ಲಾಮಿನ ಆಶಯಗಳನ್ನು, ಆದರ್ಶಗಳನ್ನು ಜೀವನದೊಂದಿಗೆ ಬೆಳೆಸುತ್ತಾ, ತನ್ನೊಡನೆ ಇಸ್ಲಾಮ್ ಧರ್ಮಕ್ಕೆ ಅಂದಿನ ಮಕ್ಕಾ ನಿವಾಸಿಗಳನ್ನು ಕ್ಷಣಿಸುತ್ತಲಿರುವಾಗ, ಭಯ,ಕೋಪಗೊಂಡ ಮಕ್ಕಾ ಮುಶ್ರಿಕರು ಪ್ರವಾದಿ(ಸ.ಅ) ಮತ್ತು ಸ್ವಹಾಬಿಗಳ ಮೇಲೆ ನಿರಂತರ ಆಕ್ರಮಣ, ಅತಿಕ್ರಮಣ ನಡೆಸತೊಡಗಿದರು. ಇಸ್ಲಾಮನ್ನು ಪ್ರಚಾರ ಮುಂದುವರೆಸುವುದು ಇನ್ನುಮುಂದೆ ಮಕ್ಕಾದಲ್ಲಿ ಅಸಾಧ್ಯವೆಂದರಿತಾಗ, ಈ ಬಗ್ಗೆ ಅಲ್ಲಾಹನಲ್ಲಿ ಕೇಳಿದಾಗ, ಮಕ್ಕಾದೆಡೆಗೆ ಪ್ರಯಾಣ ಬೆಳೆಸಬೇಕೆಂಬ ಆಜ್ಞೆ ನೆಬಿ(ಸ.ಅ) ತಂಙಳರಿಗೆ ಸಿಗುತ್ತದೆ. ಅದರಂತೆಯೇ ಮಕ್ಕಾದ ಮುಸ್ಲಿಮರ ಜೊತೆಗೂಡಿ ಪರಿಶುದ್ಧ ನೆಬಿ(ಸ.ಅ)ಯವರು ಮಕ್ಕಾ ಮುಶ್ರಿಕರ ಕಣ್ತಪ್ಪಿಸಿ ಮದೀನಾ ಸೇರಿದರೆ, ಅಲ್ಲಿ ಅಬೂಜಹಲನ ದರ್ಬಾರು. ಅಲ್ಲಾಹನ ಮೇಲಿರುವ ಪ್ರೀತಿ ಮತ್ತು ವಿಶ್ವಾಸದಿಂದ ನೆಬಿ(ಸ.ಅ) ತಂಙಳ್ ಮತ್ತು ಸಹಚರರು ಮದೀನಾದಲ್ಲಿ ನೆಲೆನಿಂತು ಇಸ್ಲಾಮನ್ನು ಜನರಿಗೆ ತಲುಪಿಸಲಾರಂಭಿಸುತ್ತಿದ್ದಂತೆ, ಅಬೂಜಹಲನ್ನೇ ದೇವರು ಎಂದು ನಂಬಿದ್ದ ಮದೀನಾ ನಿವಾಸಿಗಳು ಇಸ್ಲಾಮಿನೊಂದಿಗೆ ಕೈಜೋಡಿಸುವಾಗ, ಅಬೂಜಹಲ್ ಅಚ್ಚರಿಪಡುತ್ತಾನಲ್ಲದೆ, ಕೋಪಗೊಳ್ಳುತ್ತಾನೆ. ಹಾಗಾಗಿ ನೆಬಿ(ಸ.ಅ) ತಂಙಳ್ ಮತ್ತು ಸ್ವಹಾಬಿಗಳು ಮದೀನಾ ತಲುಪಿದ ಎರಡೇ ವರ್ಷದಲ್ಲಿ ಈ ಯುದ್ಧವು ಅನಿವಾರ್ಯವಾಗುತ್ತದೆ.
100 ಕುದುರೆಗಳು ಮತ್ತು 170 ಒಂಟೆಗಳೊಂದಿಗೆ, ಸಕಲ ಆಯುಧಗಳೊಂದಿಗೆ, ಯುದ್ಧ ತಯಾರಿಯೊಂದಿಗೆ ಸಾವಿರಕ್ಕೂ ಮಿಕ್ಕ ಮದೀನಾ ಮುಶ್ರಿಕರು ಒಂದು ಭಾಗದಲ್ಲಿ ನಿಂತಿದ್ದರೆ,
2 ಕುದುರೆ ಮತ್ತು 70 ಒಂಟೆಗಳೊಂದಿಗೆ, ಶರೀರ ಪೂರ್ತಿ ಮಯಚ್ಚಲು ಬಟ್ಟೆಯೂ, ಕಾಲಿಗೆ ಚಪ್ಪಲಿಯೂ ಇಲ್ಲದೇ, ಮರಳುಗಾಡಿನಲ್ಲಿ ಬರಿಗಾಲಿನಲ್ಲಿ ನಡೆದು ಬಂದು ಯುದ್ಧಭೂಮಿ ಸೇರಿದ ಅಲ್ಲಾಹನ 313 ದಾಸರು ಇನ್ನೊಂದು ಪಕ್ಷದಲ್ಲಿ..
ಈ ಕಿರುಸೈನ್ಯವನ್ನು ಕಂಡು ಅಬೂಜಹಲ್ ಗಹಗಹಿಸಿ ನಕ್ಕಿದರೂ, 'ಅವರು ಆಕ್ರಮಣ ಮಾಡುವವರೆಗೆ ನಾವು ಆಕ್ರಮಣ ಮಾಡಕೂಡದು' ಎಂಬ ಅಪ್ಪಣೆಯನ್ನು ಪ್ರವಾದಿವರ್ಯರು ಸ್ವಹಾಬಿಗಳಿತ್ತರೆ, ಇಸ್ಲಾಮಿನ ಸಂದೇಶವು ಇದರಿಂದಲೇ ಅರ್ಥೈಸಿಕೊಳ್ಳಬಹುದು..
ಅಬೂಜಹಲಿನ ಬೃಹತ್ ಸೈನ್ಯದೊಂದಿಗೆ, ಯುದ್ಧಾಯುಧಗಳು, ಖಡ್ಗ-ಬಾಣಗಳು ಝಳಪಿಸುತ್ತಿದ್ದರೆ, ಅಲ್ಲಾಹನ ದಾಸರಾದ 313 ಮಂದಿ ಸೈನ್ಯದ ಹೃದಯದಲ್ಲಿನ 'ತಖ್ವಾ' ಎಂಬ ಆಯುಧವು ಇನ್ನಷ್ಟು ಹರಿತವಾಗಿತ್ತು. ಸರ್ವದನ್ನೂ ಅಲ್ಲಾಹನಿಗರ್ಪಿಸಿ, ಅಲ್ಲಾಹನಿಗಾಗಿ, ಇಸ್ಲಾಮಿಗಾಗಿ ತನ್ನ ಪ್ರಾಣ ನೀಡಲು ಸನ್ನದ್ಧರಾಗಿದ್ದ ನೆಬಿ(ಸ.ಅ) ಮತ್ತು ಸ್ವಹಾಬಿಗಳು ಅಲ್ಲಾಹನ ಮೇಲೆ ಭರವಸೆಯಿಟ್ಟುಕೊಂಡ ಪರಿಣಾಮ ವಿಜಯ ಮುಸಲ್ಮಾನರ ಪಕ್ಷ ಸೇರಿಕೊಳ್ಳುತ್ತದೆ.
ಅಲ್ಲಾಹನು ಪವಿತ್ರ ಕುರ್'ಆನಿ ನಲ್ಲಿ
ಹೇಳುತ್ತಾನೆ,
"ನೀವು ನಿಮ್ಮ ಪ್ರಭುವಿನೊಂದಿಗೆ ಸಹಾಯವನ್ನು ಬೇಡಿದ ಸಂದರ್ಭ(ವನ್ನು ಸ್ಮರಿಸಿರಿ).
ಆಗ ಸಾವಿರ ಮಲಕ್ ಗಳನ್ನು ಎಡೆಬಿಡದೆ ಕಳುಹಿಸುವ ಮೂಲಕ ನಾನು ನಿಮಗೆ ಸಹಾಯ ಮಾಡುವೆನು ಎಂದು ಅವನು ನಿಮಗೆ ಉತ್ತರವಿತ್ತನು."
[ಅಲ್-ಅನ್ಫಾಲ್ : 9]
ಯುದ್ಧ ಸಮಯದಲ್ಲಿ ಅಲ್ಲಾಹನೊಂದಿಗೆ ಸಹಾಯ ಬೇಡಿದ ಪರಿಣಾಮ, ಅಲ್ಲಾಹನು ಮಲಕುಗಳನ್ನು ರಣಾಂಗಣಕ್ಕೆ ಕಳುಹಿಸುತ್ತಾನೆ. ಅಲ್ಲಾಹುವಿನ ಮಲಕುಗಳು ಇಸ್ಲಾಮಿನ ಪರವಾಗಿ ಅಬೂಜಹಲ್ ನ ಮೇಲೆ ಯುದ್ಧ ಪ್ರಯೋಗ ಆರಂಭಿಸುವುದರೊಂದಿಗೆ, ಅಬೂಜಹಲ್ ಸೈನ್ಯ ಭಯಭೀತವಾಗುತ್ತದೆ. ಯುದ್ಧ ಕೊನೆಗೊಂಡು, ಬದ್ರಿನ ರಂಗಭೂಮಿಯಲ್ಲಿ ಹಸಿರು ಪತಾಕೆ ಹಾರಲ್ಪಟ್ಟು, ತಕ್ಬೀರಿನ ಧ್ವನಿ ಮೊಳಗುವಷ್ಟರಲ್ಲಿ, 14 ಸ್ವಹಾಬಿಗಳು ಅಲ್ಲಾಹನ ಸನ್ನಿಧಿಗೆ ತೆರಳಿದರೆ, 70 ಮುಶ್ರಿಕ್ ಗಳು ನೆಲವನ್ನಪ್ಪಿದ್ದರಲ್ಲದೇ, ಅನೇಕ ಮಂದಿ ಅಬೂಜಹಲ್ ನ ಸೈನಿಕರು ಯುದ್ಧ ಕೈದಿಗಳಾಗಿದ್ದರು.
ಯುದ್ಧದಲ್ಲಿ ಹುತಾತ್ಮರಾದ ಸ್ವಹಾಬಿಗಳನ್ನು ಬದರಿ'ಗಳು ಎಂದು ಕರೆಯಲ್ಪಡುವುದಲ್ಲದೇ, ಅವರಿಗೆ ಪ್ರತ್ಯೇಕವಾದ ಸ್ಥಾನಮಾನಗಳಿವೆ. ಅವರ ಸ್ಮರಣಾರ್ಥ ಇಂದು ಪ್ರತೀ ರಮಳಾನ್ 17 ನೇ ದಿನ 'ಬದರ್ ದಿನ' ಎಂಬ ಹೆಸರಲ್ಲಿ ವಿಶೇಷ ಆಚರಣೆಯೊಂದಿಗೆ ಬದರಿಗಳನ್ನು ಸ್ಮರಿಸುತ್ತಾ, ಅಲ್ಲಾಹನೊಂದಿಗೆ ಹತ್ತಿರವಾಗಲು ಪ್ರತೀ ಮುಸಲ್ಮಾನನೂ ಕಾತರಿಸುತ್ತಿದ್ದಾರೆ..
ಅಲ್ಲಾಹನು ಆ ಮಹಾನರುಗಳ ಬರ್ಕತ್ ನೊಂದಿಗೆ ನಮ್ಮೆಲ್ಲರ ಇಹ-ಪರ ಜೀವನ ವಿಜಯದಲ್ಲಿರಿಸಲಿ.. ಆಮೀನ್.. ಯಾರಬ್ಬಲ್ ಆಲಮೀನ್..
★ suwichaar.blogspot.in ★
#ಹಕೀಂ ಪದಡ್ಕ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou