ಮಾತು-ಮೌನದ ಬಾಂಧವ್ಯ..
ಮೌನದಿಂದ
ಬಾಂಧವ್ಯವನ್ನು
ಉಳಿಸಬಹುದು..
ಹೆಚ್ಚಾದರೆ
ಸಂಬಂಧವು
ಅಳಿಯಲೂಬಹುದು..
ಮಾತಿನಿಂದ
ಬಾಂಧವ್ಯವನ್ನು
ಬೆಳೆಸಬಹುದು..
ಮಾತು ಹೆಚ್ಚಾದಲ್ಲಿ,
ಸಂಬಂಧವು
ಕಳಚಲೂಬಹುದು..
ಮಾತು ಬೆಳ್ಳಿ,
ಮೌನ ಬಂಗಾರ
ಆಗಬಹುದು..
ಮೌನ ಬೆಳ್ಳಿ,
ಮಾತು ಬಂಗಾರ
ಆಗಲೂಬಹುದು..
ನಾವಾಡುವ ಮಾತಿನಿಂದ,
ನಮ್ಮಾತಿನ ಮೌನದಿಂದ,
ಸಂಬಂಧವ ಅಳೆಯಬಹುದು..
ಮೌನವೇ ಜೀವನ..
ಮಾತೇ ಪಾವನ..
★ http://suwichaar.blogspot.in ★
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou