ರಮಳಾನ್-ಪೆರ್ನಾಳ್..
ಹತ್ತಿಪ್ಪತ್ತು ದಿನದ ಬಳಿಕ ಬರುವ,
ಪೆರ್ನಾಳಿಗಾಗಿ ಅವನು ಇಂದೇ,
ಹೊಸವಸ್ತ್ರ ತೆಗೆದಿಟ್ಟು ತಯಾರುಗೊಂಡಿದ್ದ..
ನಾಳೆಯೂ ಬರಬಹುದಾದ,
ಮರಣವನ್ನು ಸ್ವೀಕರಿಸಲು,
ಆತನಿನ್ನೂ ಸಿದ್ಧವಾಗಿರಲಿಲ್ಲ..
------------------------------------------
ಪೆರ್ನಾಳಿನ ದಿನ ಆತ,
ಜನರೆಡೆಯಲ್ಲಿ ಮಿಂಚಬೇಕೆಂದು,
ಹೊಸ ಮಾಡೆಲ್ ವಸ್ತ್ರ ಕೊಂಡುಕೊಂಡ..
ಉಪವಾಸ ಹತ್ತು ಕಳೆದಿದ್ದರೂ,
ಆತನ ಹೃದಯ ಮಾತ್ರ,
ಪ್ರಕಾಶವಿಲ್ಲದೇ ಕತ್ತಲಲಿತ್ತು..
------------------------------------------
ತರಾವೀಹ್ ನಮಾಝಿಗೆ,
ಮಸೀದಿಯಲ್ಲಿ ಕಾಣುತ್ತಿರುವ,
ಜನರ ಬರ,
ರೆಡಿಮೇಡ್ ಶಾಪಲ್ಲಿ ಕಾಣುತ್ತಿಲ್ಲ..
------------------------------------------
ಇವತ್ತು ಉಪವಾಸ ಹಿಡಿಯದ ಅವನು,
ನಾಳಿನ ಪೆರ್ನಾಳಿನ ನಿರೀಕ್ಷೆಯಲ್ಲಿದ್ದ..
------------------------------------------
ಆತ ಅಂದುಕೊಂಡಿದ್ದು,
' ಪೆರ್ನಾಳಿಗೆ ಹೊಸ ಬಟ್ಟೆ ಧರಿಸುವುದು,'
*ಖಡ್ಡಾಯ*
ಮತ್ತು
'ರಮಳಾನಿನಲ್ಲಿ ವ್ರತಾಚರಿಸುವುದು,'
*ಸುನ್ನತ್* ಎಂದಾಗಿತ್ತೇನೋ..
ಹಾಗಿತ್ತು ಆತನ ನಡವಳಿಕೆ..
------------------------------------------
ರಮಳಾನಿನಲ್ಲಿ
ಹಸಿರೆಲೆಗಳು
ಚಿಗುರಿ,
ಸಮೃದ್ಧವಾಗಿತ್ತು..,
ಅವನ ಹೃದಯವಿನ್ನೂ
ಹೆಪ್ಪುಗಟ್ಟಿತ್ತು..
------------------------------------------
★ http://suwichaar.blogspot.in ★
✍ ಹಕೀಂ ಪದಡ್ಕ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou