ಭಿಕಾರಿಯಾದೆ ನಾ...
ಕಾಡಿ-ಬೇಡಿ ಉನ್ನಲೆಂದೇ,
ನನಗೆ ಜನ್ಮವಾಯಿತೇನೋ..?
ಎಲ್ಲಾ ಮಗುವಿಗಿಂತಲೂ,
ನಾನೇಕೆ ಭಿನ್ನವಾದೆನೋ..?
ತಾಯಿಯ ಕೈತುತ್ತಿನ
ಪರಿಚಯವೇ ನನಗಿಲ್ಲ..
ತಂದೆ ಮುದ್ದು ಮಾಡುವರು
ಎಂಬ ಅರಿವೂ ಎನಗಿಲ್ಲ..
ನಡೆವ ದಾರಿಯಲ್ಲಿ ನಾನು
ಕಾಲು ಹಿಡಿದು ಬೇಡಿದಾಗ,
ಕಣ್ತುಂಬಿ ಭಿಕ್ಷೆ ನೀಡುವವನೇ
ನನಗೆ ಒಲಿದ ತಂದೆ..!
ಮನೆ ಬಾಗಿಲಲ್ಲಿ ನಾನು
ತಟ್ಟೆ ಹಿಡಿದು ತಟ್ಟಿದಾಗ
ಹಿಟ್ಟನ್ನು ಸುರಿದವಳೇ
ನಾ ಕಂಡ ತಾಯಿ ..!
ದುಡಿಯುವ ಸಾಮರ್ಥ್ಯ ನನಗಿಲ್ಲ..
ಕಲಿಯುವ ಅರ್ಹತೆ ನನಗಿಲ್ಲ..
ಸಿಕ್ಕವರ ಕೈಕಾಲು ಹಿಡಿದೆಳೆದು,
ಹೊಟ್ಟೆ ತುಂಬುವವನು ನಾನು..
ತಾಯಿಯ ಮಡಿಲಲ್ಲಿ ಬಿದ್ದು
ನಲಿದಾಡಬೇಕಾದ ನಾನು,
ತಂದೆಯ ಪ್ರೀತಿಯಲ್ಲಿ ಮಿಂದು,
ಧನ್ಯನಾಗಬೇಕಾದ ನಾನಿಂದು,
ರಸ್ತೆಗಿಳಿದು ಕೈಚಾಚುತಿರುವೆ..
ಹೊಟ್ಟೆ ಸುಡುವಾಗ ನನಗೆ,
ಸಹನೆಯ ಕಟ್ಟೆಯೊಡೆಯುವುದು..
ಬೇರೆ ದಾರಿ ಕಾಣದಾದಾಗ ನಾನು,
ಬಿಟ್ಟಿ ಅನ್ನವನ್ನು ಬಯಸುವುದು..
ಹಸಿವನ್ನು ದೂರ ಮಾಡಲು,
ನನ್ನವರು ಎಂಬವರಿಲ್ಲ..
ಕಣ್ಣೀರಿಗೆ ಸಾಂತ್ವನ ನುಡಿಯಲು,
ನನಗಾಗಿ ಯಾರೂ ಇಲ್ಲ..
ನತದೃಷ್ಟ ನಾನು..
ತನಗೆಂದು ಯಾರೂ ಇಲ್ಲ ..
ಸ್ವಂತದ್ದಾಗಿ ಏನೂ ಇಲ್ಲ ..
ಕೊಡುವ ಕೈಗಳ ತುತ್ತುಗಳೇ,
ನನ್ನ ಜೀವನದ ದಾರಿ..
★ suwichaar.blogspot.in ★
# ಹಕೀಂ ಪದಡ್ಕ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou