ಹಿಜಾಬ್..
ಐಸ್ ತುಂಡೊಂದನ್ನು,
ಫ್ರಿಡ್ಜಲ್ಲಿ ಇಡಲಾಗಿತ್ತು..
ಯಾರೋ ಬಂದು ಹೇಳಿದ;
''ಅದನ್ನು ಹೊರಗಿಡು, ಅದಕ್ಕೂ ಬೇಕು ಸ್ವಾತಂತ್ರ್ಯ'' ಅಂತ..
ಪಾಪ ಆತನ ಮಾತನ್ನು ಕೇಳಿ,
ಐಸ್ ತುಂಡನ್ನು ಹೊರಗಿಟ್ಟ..
ಕ್ಷಣದಲ್ಲೇ ಅದು ಕರಗಿ ನೀರಾಗಿ ಹೋಯ್ತು..
---------------------------------------------
ರಸ್ತೆಯಲ್ಲೊಂದು ಮಿಠಾಯಿ,
ಸಿಪ್ಪೆ ಕಳಚಿ ಬಿದ್ದಿತ್ತು..
ಎಲ್ಲರೂ ಅದಕ್ಕೆ ಮೆಟ್ಟಿ ನಡೆದು,
ಅದು ಮಣ್ಣಾಗಿ ಹೋಯ್ತು..
ಸ್ವಲ್ಪ ಮುಂದೆ ಅದೇ ರಸ್ತೆಯಲ್ಲಿ,
ಸಿಪ್ಪೆಯೊಳಗೆ ಬಂಧಿತವಾಗಿದ್ದ,
ಚಾಕಲೇಟ್ ಬಿದ್ದುಕೊಂಡಿತ್ತು..
ಎಷ್ಟೇ ಜನ ಮೆಟ್ಟಿನಡೆದರೂ, ಅದು
ಇನ್ನೂ ಶುಭ್ರವಾಗಿತ್ತು..
ಕೊನೆಗೆ,
ಒಬ್ಬ ಮುಗ್ಧ ಮಗು ಬಂದು,
ಹೆಕ್ಕಿಕೊಂಡು ಹೋದ..
---------------------------------------------
ಬುರ್ಖಾ-ಹಿಜಾಬ್ ನಿಷೇಧಿಸಬೇಕೆಂಬ ಪ್ರತಿಭಟನೆಯಲ್ಲಿ ಆತ ನಾಯಕನಾಗಿದ್ದ..
'ಬುರ್ಖಾ ಹೆಣ್ಣಿನ ಬಂಧನ' ಅಂತ ಬೊಬ್ಬಿಡುತ್ತಿದ್ದ ಆತನ ಫೋನ್ ರಿಂಗಣಿಸಿತು..
'ಜೀನ್ಸ್-ಟೀ ಶರ್ಟು ಉಟ್ಟು ಮಾಲ್ ತೆರಳಿದ ತನ್ನ ಸಹೋದರಿ, ಅತ್ಯಾಚಾರಕ್ಕೆ ಗುರಿಯಾದಳು' ಎಂಬ ವಾರ್ತೆ ಆತನ ಕಿವಿಯೊಳಗೆ ನುಗ್ಗಿತು..
---------------------------------------------
🔵 http://suwichaar.blogspot.in 🔵
✍ ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou