ಕವಿತೆಯೆಂದರೇನು..? ಮತ್ತು ನಾನೇಕೆ ಬರೆಯುತ್ತೇನೆ..?

       ಕಾವ್ಯ ಮನೆಯ ಹೃದಯದಲ್ಲಿ ಕಾವೇರಿಸಿರುವ ಎರಡು ಪ್ರಶ್ನೆಗಳಿವು. ಈ ಎರಡು ಪ್ರಶ್ನೆಗಳಿಗೆ ನಿಖರವಾದ ಉತ್ತರ ಅರಿಯದು. ಎಲ್ಲರೂ ಕವನದಂತೆಯೇ ಈ ಪ್ರಶ್ನೆಗೂ ತಮ್ಮ ತಮ್ಮ ಕಲ್ಪನಾ ಲೋಕದ ಕಾಲ್ಪನಿಕ ಉತ್ತರ ನೀಡುವಾಗ ನಾನೂ ಆ ಕೂಟದಲ್ಲಿ ಒಂದು ಬಿಂದುವಾಗುತ್ತೇನೆ ಅಷ್ಟೇ..
      ನನ್ನ ಮನಸ್ಸಿನ ಮಾತನ್ನು ಅಂಗೀಕರಿಸಿ ಹೇಳುವುದಾದರೆ, ಕವನ ಅಂದರೆ; ಒಂದೇ ಮಾತಲ್ಲಿ ಭಾವನೆಗಳಿಗೆ ಅಕ್ಷರಭಾಷೆ ಕೊಡುವುದು..,
ಅಂದರೆ, ಮನಸ್ಸು, ಹೃದಯ ಮತ್ತು ಮೆದುಳು ಈ ಮೂರು ಅಂತರಾಂಗವು ಒಟ್ಟಾಗಿ ಭಾವಪಡಿಸಿದ ಭಾವನೆಯನ್ನು ಕವಿಶಕ್ತಿಯ ಪದಪುಂಜದೊಂದಿಗೆ ಕವನ(ಅಕ್ಷರ) ರೂಪದಲ್ಲಿ ಬಿತ್ತಲ್ಪಡುತ್ತದೆ. ಕವನವು ಪ್ರತೀಬಾರಿ ಒಂದೇ ಅರ್ಥವನ್ನು ಕೊಡಲಾರದು. ಸಂದರ್ಭದಕ್ಕನುಸಾರವಾಗಿ ಪ್ರತೀ ಕವನವು ತನ್ನ ಅರ್ಥರೂಪ(ಸಾರಾಂಶ)ದಲ್ಲಿ ಬದಲಾವಣೆ ಉಂಟುಮಾಡುತ್ತದೆ..
ಕವಿತೆ ಅಂದರೆ, ನನ್ನ ಪ್ರಕಾರ ಭಾವನೆಗಳಷ್ಟೇ..

       ನಾನೇಕೆ ಬರೆಯುತ್ತೇನೆ..? ಎಂದು ನನ್ನನ್ನು ನಾನು ಕೇಳಿಕೊಂಡಾಗ ನನ್ನ ಮನಸ್ಸು ನನಗೆ ಕೊಟ್ಟ ಉತ್ತರ ಭಾವನೆಗಳನ್ನು ಬಿತ್ತರಿಸಲು ಎಂದಾಗಿತ್ತು..
ಎದೆಯೊಳಗೆ ಹೊಳೆದ ಭಾವಗಳನ್ನು ಕಾವ್ಯ ಯಾ ಬರಹದ ಮೂಲಕ ನಾನು ಬಿತ್ತರಿಸುತ್ತೇನೆ. ಇಲ್ಲಿ ಭಾವನೆಗಳು ಅಂದರೆ, ಅನ್ಯಾಯ, ಶೋಷಣೆ, ಅನೈತಿಕತೆಯ ವಿರುದ್ಧದ ಧ್ವನಿಯಾಗಿರಬಹುದು.. ಧರ್ಮ-ಅಧರ್ಮದ ಕಲ್ಪನೆಯಾಗಿರಬಹುದು.. ಪ್ರೀತಿ-ಪ್ರಣಯದ ಸವಿನುಡಿಯಾಗಿರಬಹುದು.. ಹೊಗಳಿಕೆ-ತೆಗಳಿಕೆಯ ಮಾತಾಗಿರಬಹುದು. ಒಟ್ಟಾರೆ ಮನಸ್ಸು ಏನು ಹೇಳುತ್ತದೋ ಅದನ್ನು ಯಥಾವತ್ತಾಗಿ ನಿಮ್ಮ ಮುಂದಿಡುತ್ತೇನೆ. ಈ ಬರಹವನ್ನೂ ನನ್ನ ಮಾತು ಅಂತ ಹೇಳುವಯದಕ್ಕಿಂತ ನನ್ನ ಮನಸ್ಸಿನ ಮಾತು ಅನ್ನುವುದು ಒಳಿತು. ನಾನು ಹಲವದನ್ನು(ಸ್ನೇಹ, ಹಾರೈಕೆ, ಮಿತ್ರಕೂಟ, ಸಮಯ, ಸದ್ಗುಣ ..ಇತ್ಯಾದಿ) ಸಾಧಿಸಬೇಕು ಎಂಬ ದೃಷ್ಟಿಯಲ್ಲಿ ಬರೆಯುತ್ತಿದ್ದೇನೆ ಅಂದರೂ ತಪ್ಪಲ್ಲ..
ನನ್ನ ಭಾವನೆಯ ಬೀಜವನ್ನು ಸಾಹಿತ್ಯದ ಗದ್ದೆಯಲ್ಲಿ ಬಿತ್ತುವುದು ಸಾಧನೆಯ ಫಸಲು ಕಾಣುವುದಕ್ಕಾಗಿ..

(ವಿಸ್ತಾರವಾಗಿ ವಿಸ್ತರಿಸಬೇಕಾದ ವಿಷಯ ವಸ್ತು ಇದಾಗಿದ್ದರೂ, ಪದಗಳ ಮಿತಿಯ ನಿಯಮವು ನನಗೆ ಕಂಟಕವಾದ ಕಾರಣ ಇಷ್ಟಕ್ಕೇ ಪರಿಮಿತಗೊಳಿಸುತ್ತಿದ್ದೇನೆ..)

ಮುಂದೊಂದು ದಿನ ವಿಸ್ತಾರವಾಗಿ ಬರೆಯುವ ಭರವಸೆಯೊಂದಿಗೆ..,
✍ ಹಕೀಂ ಪದಡ್ಕ..
------------------------------

ಕಾವ್ಯಮನೆ ಎಂಬ ವಾಟ್ಸಪ್ ಬಳಗ ಏರ್ಪಡಿಸಿದ ಪ್ರಸ್ತುತ ವಸ್ತು ವಿಷಯದ ಬಗೆಗಿನ ಕಿರುಲೇಖನ ಸ್ಪರ್ಧೆಯಲ್ಲಿ ನಾನು ಬರೆದ ಪ್ರಬಂಧ ಇದು..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!