ಕವನವೆಂದರೆ..??

ಕವನವೆಂದರೆ..,
ಕವಿಯ ಮನದೊಳಗೆ
ಅಚ್ಚಾದ ಕಿಚ್ಚನ್ನು ಬಿಚ್ಚಿ ಹಚ್ಚಿ
ಜಗವನ್ನು ಬೆಳಗುವುದು..

ಕವನವೆಂದರೆ..,
ಕಾವ್ಯ ಹೃದಯದ
ಹಿತವಾದ ಸಾಹಿತ್ಯವನ್ನು
ವಿಶ್ವಕ್ಕೆ ಪರಿಚಯಿಸುವುದು..

ಕವನವೆಂದರೆ..,
ಲೇಖನಿಯೆಂಬ ಖಡ್ಗವನ್ನೆತ್ತಿ
ಜಗತ್ತಿನೊಡನೆ ಹಾಳೆಯಲ್ಲೇ
ಯುದ್ಧ ಮಾಡುವುದು..

ಕವನವೆಂದರೆ..,
ಸತ್ಯವನ್ನು ಸತ್ಯವೆಂದೇ,
ಸುಳ್ಳನ್ನು ಸುಳ್ಳೆಂದೇ
ಜಗದೊಳು ನ್ಯಾಯೀಕರಿಸುವುದು..

ಕವನವೆಂದರೆ..,
ಮನಸ್ಸಿನ ಮಾತನ್ನು
ಅಕ್ಷರದ ಭಾಷೆಯಲ್ಲಿ
ಜನರಿಗೆ ಸಾರುವುದು..

ಕವನವೆಂದರೆ..,
ಬಿಳಿ ಕಾಗದದಲ್ಲಿ
ಏನಾದರೂ ಒಂದನ್ನು
ಸುಮ್ಮನೆ ಗೀಚುವುದು..

★ http://suwichaar.blogspot.in ★

# ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!