ಮಗುವಿನ ನಗು..

ಮಗುವೊಂದು ನಗುತಿರಲು,
ಮನೆಯೆಲ್ಲಾ ಬೆಳಗಿದೆ..
ಚಂದಿರನು ರಾತ್ರಿಯಲ್ಲಿ,
ಜಗವನ್ನು ಬೆಳಗಿದಂತೆ...

ಮುಖದ ಆ ಕಾಂತಿಯು,
ಫಳಫಳನೆ ಹೊಳೆಯುತಿದೆ..
ಅಂಬರದ ಚುಕ್ಕೆಗಳು,
ಮೋಡಗಳೆಡೆಯಲ್ಲಿ ಮಿನುಗಿದಂತೆ..

ಮಗು ಮನೆಯೊಳಗಿದ್ದರೆ,
ಸೂರಿಡೀ ಹಸಿರಾಗುತ್ತದೆ..
ಮುಂಗಾರಿಗೆ ಪಚ್ಚೆ ಪಡೆದ,
ಭತ್ತದ ಪೈರಿನಂತೆ..

ಮಗುವಿನಾಟವ ಕಂಡು,
ಬೇಸರವೂ ಓಡಿ ಹೋಗಿದೆ..
ಬೆಕ್ಕನ್ನು ಹೆದರಿ,
ಇಲಿಯು ಓಡಿದಂತೆ..

ಮಗು ನಗುತಿರಲು..,
ಮನೆ ಬೆಳಗಿದೆ..
ಅಳುತಿರಲು,
ಕತ್ತಲಾಗಿದೆ....

#ತೂತು ಬಿದ್ದ ಜೋಪಡಿಯಲ್ಲಿ ‌..

-> ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ತಾಯಿಯ ಗರ್ಭ..!

ಜೇನುಗೂಡು..!