ಅಲ್ಲಾಹ್.. ಕ್ಷಮಿಸು..

ಯಾ ಅಲ್ಲಾಹ್..
ಪಾವನ ರಮಳಾನ್ ಮಾಸ,
ಕಣ್ಮುಚ್ಚಿ ತೆರೆಯುವಷ್ಟರಲ್ಲಿ,
ಎತ್ತಲೋ ಹಾರಿ ಹೋಗಿದೆ..
ದಿನಗಳು ಕಳೆದು ಹೋದದ್ದು,
ಯಾಕೋ ನಾ ತಿಳಿಯದಾದೆ..

ಯಾ ಅಲ್ಲಾಹ್..
ಕರುಣೆಯರಸುವ ದಿನಗಳೂ,
ಕ್ಷಮಾಪನೆಯ ಅವಸರವೂ,
ಕಳೆದು ಹೋಗುತ್ತಲಿದೆ..
ಇಫ್ತಾರ್, ಸಹರಿಯ ಉಣ್ಣುತ್ತಲೇ
ರಮಳಾನನ್ನು ಕಳೆದುಕೊಂಡೆ..

ಯಾ ಅಲ್ಲಾಹ್..
ನಾವು ಮಾಡಿದ ಪುಣ್ಯಕ್ಕೆ
ನೀನು ನೀಡುವ ಪ್ರತಿಫಲವು,
ಎಪ್ಪತ್ತು ಪಟ್ಟು ಎಂದು ತಿಳಿದ ನಾವು,
ಪಾಪಗಳಿಗೂ ಅಷ್ಟೇ ಪಟ್ಟು,
ಶಿಕ್ಷೆಯಿದೆಯೆಂಬುದ ಮರೆತೆ..

ಯಾ ಅಲ್ಲಾಹ್..
ರಮಳಾನ್ ಸಾಗುತಿದೆ ಮುಂದೆ..
ಮತ್ತೊಮ್ಮೆ ನಮ್ಮಡೆಗೆ ಬರುವಾಗ,
ನಾವೆಲ್ಲಿ ಹೇಗಿರುವೆವೋ  ಬಲ್ಲೆ..
ಇದು ನಮಗಿರುವ ಕೊನೆಯ
ರಮಳಾನ್ ಆಗಿದೆಯೋ ತಿಳಿಯೆ..

ಯಾ ಅಲ್ಲಾಹ್..
ರಮಳಾನಿನಲ್ಲಿ ಇಬ್ಲೀಸನನ್ನು,
ಕಟ್ಟಿ ಹಾಕಿದ್ದು ನನ್ನ ಹೃದಯದಲ್ಲೇ..?
ಯಾಕಿಷ್ಟು ಪಾಪಗಳು, ತಪ್ಪುಗಳು..?
ನಿಯಂತ್ರಣಕ್ಕೂ ಬಾರದಷ್ಟು..
ಅಲ್ಲಾಹ್.. ಕ್ಷಮಿಸಿ ಬಿಡು..

ಯಾ ಅಲ್ಲಾಹ್..
ಪರಿ ಪರಿಯಾಗಿ ಯಾಚಿಸುವೆನು,
ಚಿನ್ನ-ಒಡವೆಗಳ ನೀಡು ಎಂದಲ್ಲ..
ನಾ ಮಾಡಿದ ತಪ್ಪುಗಳಿಗೆ,
ನಿನ್ನ ಕಾರುಣ್ಯದಂಗಲದಲ್ಲಿ
ಮಾಫ್' ನೀಡು ಎಂದು..
ಅಲ್ಲಾಹ್.. ಮತ್ತೆ ಕ್ಷಮಿಸು..
ಅಲ್ಲಾಹ್.. ಮತ್ತೆ ಕ್ಷಮಿಸು..

www.suwichaar.blogspot.in

#ಹಕೀಂ ಪದಡ್ಕ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!