ಈ ಲೋಕ, ವಿಚಿತ್ರ..
ತಪ್ಪು ಮಾಡದವನಿಗಿಲ್ಲಿ ಶಿಕ್ಷೆ,
ಹಣವಿದ್ದವನಿಗೂ ಬೇಕು ಭಿಕ್ಷೆ,
ಶೋಷಿತರಿಗೆ ಇಲ್ಲಿ ಇಲ್ಲ ರಕ್ಷೆ,
ಇದು ನಮ್ಮ ಈ ಲೋಕದ ನಕ್ಷೆ..
ಇಲ್ಲಿ ಬೆಳೆದುನಿಂತಿದೆ ಭ್ರಷ್ಟಾಚಾರ..
ಸುದ್ದಿಯಾಗುತ್ತಲೇ ಇದೆ ಅತ್ಯಾಚಾರ..
ದಿನವೂ ನಡೆಯುತ್ತಲಿದೆ ಅನಾಚಾರ..
ಇದು ನಮ್ಮ ಈ ಲೋಕದ ವಾಮಾಚಾರ..
ಈ ಪುಣ್ಯ ಭೂಮಿಯಲ್ಲಿ ಇಂದು,
ಕೊಲೆ ಮಾಡುವುದೇ ಒಂದು ಕಲೆ..
ಆಧುನಿಕದ ಈ ಯುಗಕಾಲದಲ್ಲಿ,
ಎಲ್ಲೆಲ್ಲೂ ಇದೆ ಅಕ್ರಮಗಳ ಸೆಳೆ..
ಕೈ ಬರಿದಾದವನಿಗೆ ಈ ಲೋಕದಲ್ಲಿ,
ಅವಕಾಶವೆಂಬುದೇ ಇಲ್ಲವಲ್ಲ..!
ಕೈ ತುಂಬಿದವನ ಕಾಲ ಬುಡದಲ್ಲಿ,
ಬಡವರು ನರಳಾಡಿ ಬದುಕಬೇಕಲ್ಲ..!
ನ್ಯಾಯಕ್ಕೆ ಇಲ್ಲಿದೆ ಬರ..!
ವ್ಯವಹಾರಕ್ಕೆ ಇಳಿಯುವುದಾದರೆ,
ತುಂಬಿಕೊಂಡಿರಬೇಕು ಕರ..!
ಅಲ್ಲದೇ ಬದುಕಲಾರನಿಲ್ಲಿ ನರ..!
ವಿಶ್ವ ಯಾಕಾಗಿ ಇದೆ ಹೀಗೆ..?
ಇನ್ನು ಬದಲಾಗುವುದಾದಾರೂ ಹೇಗೆ..?
ಹೃದಯಗಳ ನಡುವೆ ಇದೆಯಲ್ವಾ ಹಗೆ..?
ಇಲ್ಲಿ ಎಂದು ಕಾಣುವುದು ನಗೆ..?
ಮನುಷ್ಯರಿರುವ ಈ ಭುವಿಯಲ್ಲಿ,
ಮನುಷ್ಯ ಮನಸ್ಸಿನವರಿಲ್ಲದಾಯಿತೇ..?
ಪ್ರಾಣಿಗಳಂತೇ ಬದುಕುವರಿವರು,
ಬುದ್ಧಿಹೀನರ ಕೂಟವಾಯಿತೇ..?
★ http://suwichaar.blogspot.in ★
#ಹಕೀಂ ಪದಡ್ಕ..
ಕವಿತೆ ಹೃದಯದ ಕದ ತಟ್ಡಿತು
ಪ್ರತ್ಯುತ್ತರಅಳಿಸಿಧನ್ಯವಾದ ಸರ್
ಅಳಿಸಿ