ಅಪಘಾತದ ಮುಗ್ಗುಲಲ್ಲಿ ಬಡಜೀವಗಳ ಬಲಿದಾನವಾಗುತ್ತಿದೆ..
ಮೊನ್ನೆ ದಿನ ವಳಚ್ಚಿಲ್ ನ ಹೃದ್ಬಾಗದ ಅರ್ಕುಳ ಎಂಬಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದುಹೋಯಿತು. ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೈಡರನ್ನೂ ಹಾದು ಬಂದ ಕಂಟೈನರ್ ಲಾರಿಯೊಂದು ಮಗುಚಿ ಬಿದ್ದು ಒಂದು ರಿಕ್ಷಾ ಹಾಗೂ ಕಾರನ್ನು ತನ್ನಡಿಯಲ್ಲಿ ಸಿಲುಕಿಸಿ ಚಿದ್ರಗೊಳಿಸುತ್ತದೆ. ಅದರೊಂದಿಗೆ ನಾಲ್ಕೈದು ಜೀವಗಳೂ ಒದ್ದಾಡಿ ಮರಳಲಾರದ ಲೋಕದೆಡೆಗೆ ಪಯಣ ನೆಡುತ್ತದೆ..
ಈ ಘಟನೆಯ ಕಹಿ ಜನಮನದಿಂದ ಮಾಯವಾಗುವ ಮುನ್ನವೇ ಮತ್ತೊಮ್ಮೆ ಎದೆ ನಿಶ್ಶಬ್ಧವಾಗುತ್ತದೆ. ನಿನ್ನೆ(ಆದಿತ್ಯವಾರ) ಸಂಜೆ ವೇಳೆಗೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಕರಾರಸಾನಿ ಬಸ್ಸೊಂದು ಒಂಬತ್ತು ಮಂದಿಯನ್ನು ಹೊತ್ತುಕೊಂಡಿದ್ದ ಓಮಿನಿ ಕಾರೊಂದಕ್ಕೆ ಮುತ್ತಿಟ್ಟುಕ್ಕೊಂಡು ಮೂರು ಜೀವಕ್ಕೆ ಕೊನೆಯುಸಿರಿನ ಪ್ರಸಾದವರ್ಪಿಸಿ, ಉಳಿದ ಆರು ಮಂದಿಯನ್ನು ಇಂದೋ ನಾಳೆಯೋ ಎಂಬ ಸ್ಥಿತಿಗೆ ತಲುಪಿಸುತ್ತದೆ..
ಇವೆರಡು ಮಾತ್ರವಲ್ಲ.. ದಿನಪತ್ರ, ದೂರದರ್ಶನ, ಸಾಮಾಜಿಕ ತಾಣಗಳನ್ನೆಲ್ಲ ತೆರೆದಿಟ್ಟು ಕಣ್ಣಾಡಿಸಿದಾಗ ಇಂತಹ ಹತ್ತಾರು ಘಟನೆಗಳು ದಿನವೊಂದರಲ್ಲಿ ತಿಳಿಯಲಾಗುತ್ತದೆ.. ಆ್ಯಕ್ಸಿಡಂಟ್ ನಿಂದಾಗಿಯೇ ಇಂದು ಹೆಚ್ಚಿನ ಮರಣಗಳು ಸಂಭವಿಸುತ್ತಿದೆ.. ಇದಕ್ಕೆಲ್ಲಾ ಕಾರಣರಾರು..??
'ಕುಲ್ಲು ನಫ್ಸಿನ್ ಝಾಇಕತುಲ್ ಮೌತ್..'
(ಎಲ್ಲಾ ಶರೀರವೂ ಮರಣವನ್ನು ರುಚಿಸಲಿದೆ..) ಎಂಬ ಕುರ್ ಆನಿನ ವಚನ ಅಕ್ಷರಶಃ ಸತ್ಯ. ಮರಣವಿಲ್ಲದ ಜೀವಿಯಿಲ್ಲ, ವಸ್ತುವಿಲ್ಲ. ಎಲ್ಲದ್ದಕ್ಕೂ 'ಕೊನೆ' ಎಂಬ ಪ್ರಸ್ತಾಪವಿದೆ. ಹಾಗಿದ್ದರೂ ತನ್ನ ಕೊನೆಗೆ ತಾನೇ ಕಾರಣವಾದರೆ..?
ಇಂತಹ ಸನ್ನಿವೇಶ ಹಲವು ವಿಧದಲ್ಲಿ ಸವಾಲಾಗುವುದಾದರೂ, ರಸ್ತೆ ಅಪಘಾತವು ಸ್ವಲ್ಪ ಭಿನ್ನವಾಗಿ ನಮ್ಮನ್ನು ಕಾಡುತ್ತದೆ. ಆತ್ಮಹತ್ಯೆ, ಕೊಲೆ ಇತ್ಯಾದಿ ಮನಪೂರ್ವಕವಾಗಿದ್ದರೆ, ಅಪಘಾತ ಆಕಸ್ಮಿಕ ಸರಿ.. ಆದರೆ, ಅದಕ್ಕೆ ಕಾರಣರೂ ನಾವೇ ಎಂಬುದನ್ನು ಮನದಟ್ಟುಮಾಡಿಕೊಳ್ಳಲೇಬೇಕು. ಕೈಗೆ ವಾಹನದ ಕೀಲಿಕೈಯೊಂದು ಸಿಕ್ಕಿದ ಮಾತ್ರಕ್ಕೆ ಜಗವನ್ನೇ ಮರೆತು, ಅದರಲ್ಲೇ ಸರ್ವಸ್ವವೆಂಬಂತೆ, ನಾನೇ ಎಂಬ ನಶೆಯಲ್ಲಿ ತೇಲಾಡಿ ಇಂದಿನ ಯುವಜನಾಂಗ ತನ್ನನ್ನು ತಾನೇ ಬಲಿಯಾಗಿಸುತ್ತಿದ್ದಾರೆ. 'ಮಿತಿಯಿಲ್ಲದ ವೇಗವು ಅಪಾಯಕ್ಕೆ ಆಹ್ವಾನ' ಎಂಬ ಸತ್ಯ ತಿಳಿದೂ, ಜನರೆಡೆಯಲ್ಲಿ ನಾನೊಬ್ಬ ವಿಚಿತ್ರನಾಗಬೇಕು ಎಂಬ ದುರುದ್ದೇಶದೊಂದಿಗೆ ನಿಯಂತ್ರಣ ಕಳೆದುಕೊಂಡ ವೇಗವು ಮತ್ತೆ ನಮ್ಮನ್ನು ವಿಚಿತ್ರರನ್ನಾಗಿಸದೇ ಇರಲಾರದು.
ಇಂದು ಪತ್ರ, ಮಾಧ್ಯಮಗಳಲ್ಲಿ ಕಾಣಲ್ಪಡುವುದೂ ಅದೇ.. ಅಪರಿಮಿತ ವೇಗದಿಂದಾಗಿ ನಿಯಂತ್ರಣ ಅಸಾಧ್ಯವಾಗಿ ಜೀವಬಲಿಗೆ ಕಾರಣವಾದ ಕಥೆ, ಮಧ್ಯಪಿಸಿ ವಾಹನ ಚಲಾವಣೆಯ ಮೂಲಕ ಮುಗ್ಧರ ಕೊನೆಗೆ ಕಾರಣಕರ್ತನಾದ ಚಿತ್ರಣ, ಮೊಬೈಲಲ್ಲಿ ಮಾತನಾಡುತ್ತಾ ವಾಹನ ಚಲಾವಣೆಗೈದು ಅಲ್ಲೇ ಉಸಿರು ನಿಶ್ಚಲವಾದ ಸತ್ಯ.., ಇತ್ಯಾದಿ ಇತ್ಯಾದಿ.. ದಿನವೊಂದರಲ್ಲಿ ಅದೆಷ್ಟು ಸಂಭವಗಳು..?
ಅಧಿಕ ಲಾಭದ ಉದ್ದೇಶದಿಂದ ಬೃಹತ್ ಲಾರಿಗಳು ಹಾಗೂ ಬಸ್ ಗಳು ತನ್ನ ನಿಯಂತ್ರಿತ, ನಿಗಧಿತ ವೇಗಕ್ಕೆ ಚಕ್ಕರ್ ಹೊಡೆಸಿ ಅತ್ಯಂತ ವೇಗವಾಗಿ ಹೋಗುವುದೇ ಈ ರೀತಿಯ ಅಪಾಯಕ್ಕೆ ಆಹ್ವಾನವಾಗುತ್ತದೆ. ನಾನು ಗಮನಿಸಿದಂತೆ, ಕಳೆದ ಒಂದು ಹತ್ತು ದಿನದೊಳಗಾಗಿ ಪ್ರತಿ ದಿನವೂ ಒಂದಲ್ಲ ಒಂದು ಕಡೆಯಲ್ಲಿ, ಒಂದಲ್ಲ ಒಂದು ರೀತಿಯಲ್ಲಿ ಕರಾರಸಾನಿ(KSRTC) ಬಸ್ಸು ಅಪಘಾತದ ಕರ್ತೃ ಆಗುತ್ತಲಿದೆ. ಇದು ಯಾಕೆ ಸಂಭವಿಸಿತು..? ವಿಧಿ..!! ಹೌದು ವಿಧಿಯನ್ನು ಬರೆದವನು ಮೇಲಿರುವವನಾದರೂ, ಇದರ ಚಾಲಕರೊಂದಿಷ್ಟು ಎಚ್ಚೆತ್ತುಕೊಂಡಿದ್ದರೆ..?
ಇಂದು ಹೆಚ್ಚಿನ ಸರಕಾರಿ ಬಸ್ಸುಗಳ ಚಾಲಕರು ಮಧ್ಯಪಾನಗೈದೇ ವಾಹನ ಕೈಗೆತ್ತಿಕೊಳ್ಳುತ್ತಿದ್ದಾರೆ, ಜೊತೆಗೆ ನಿರ್ವಾಹಕನೂ.. ಹಾಗಾಗಿ ಇಂತಹ ಕೆಲವೊಂದು ಜಡೆಯಬಾರದ್ದು ನಡೆಯುತ್ತದೆ..
ಅಲ್ಲದೇ..,
ಇಂದಿನ ಯುವ ತಲೆಮಾರಿನ ಬಗ್ಗೆ ಅವಲೋಕಿಸುವುದಾದರೆ..? ಅದು ಒಂದು ವಿಶಿಷ್ಠವೇ ಸೈ. ನಾಲ್ಕು ಜನರ ಮುಂದೆ ತಾನೇ ಹೀರೋ(೦) ಆಗುವ ಹುಮ್ಮಸ್ಸಿನೊಂದಿಗೆ ಗಾಡಿ ಚಲಾಯಿಸಿ ಹಿಂತಿರುಗುವಾಗ ಝೀರೋ ಆಗಿರುತ್ತಾನೆ. ತನ್ನ ಜೀವದ ಬಗ್ಗೆ ತನಗೇ ಕಾಳಜಿಯಿಲ್ಲವಾದ್ದರೂ, ಇವನ ಕಾರಣವಾಗಿ ಇನ್ನೊಂದು ಜೀವ ಹೋಗುವುದನ್ನಾದರೂ ತಪ್ಪಿಸಬಹುದಲ್ವಾ..?
ರಸ್ತೆ ಸಂಚಾರಕ್ಕೆ ಕೆಲವೊಂದು ನಿಯಮಗಳನ್ನು ಕಲ್ಪಿಸಲಾಗಿದೆ. ಅದರಂತೆ ಗಾಡಿ ಓಡಿಸಿ ನೋಡಿ.. ಎಷ್ಟು ಜೀವಗಳು ಉಳಿಯುವುದಿಲ್ಲ..?
ಪ್ರಿಯ ಜನಾಂಗವೇ..,
ಜೀವನ/ಬದುಕು/ಜೀವ ಎಂಬುದು ಸಮಯದಂತೆಯೇ ಒಮ್ಮೆ ಕಳೆದುಕೊಂಡರೆ ಮತ್ತೊಮ್ಮೆ ಸಿಗಲಾರದು. ಹಾಗಿರುವಾಗ ನಾವಾಗಿಯೇ ಯಾಕೆ ಅದನ್ನು ಕಳೆದುಕೊಳ್ಳಬೇಕು..?
ಚಿಂತಿಸಿರಿ.. ಅರ್ಥೈಸಿರಿ..
ಅಲ್ಲಾಹನು ನಮ್ಮೆಲ್ಲರನ್ನು ಈ ರೀತಿಯ ಅಪಘಾತ ಮರಣಗಳಿಂದ ಸಂರಕ್ಷಿಸಲಿ..ಆಮೀನ್...
★ http://suwichaar.blogspot.in ★
✍ ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou