ಹಣತೆ..

ಇರುಳು ತುಂಬಿದ್ದ ಜಗವನ್ನು,
ತನ್ನ ದೇಹವನ್ನರ್ಪಿಸುತ್ತಲೇ,
ಬೆಳಗುವಂತೆ ಮಾಡಿತು ಹಣತೆ..
ಕಪ್ಪಡರಿದ ಹೃದಯದಿಂದ,
ಹಣತೆಯನ್ನೇ ಸುಟ್ಟು ಕೊಂದಿತು,
ಮನುಷ್ಯತ್ವವಿಲ್ಲದ ಈ ಜನತೆ..!

ಕರಿ ಭೂಮಿಯನ್ನು,
ಬೆಳ್ಳಗಾಗಿಸಲು ಬಂದ,
ಹಣತೆಯೂ ಸತ್ತು ಹೋಯಿತು..
ಮೊದಲೇ ವಿಷ ತುಂಬಿಕೊಂಡಿದ್ದ,
ಮನುಜಪ್ರಾಣಿಯ ಕಣ್ಣಲ್ಲಿ,
ರಕ್ತವೂ ಬತ್ತಿ ಹೋಗಿತ್ತು..

ಮಾನವೀಯತೆಯ ಬೆಲೆಯರಿಯದೆ,
ಬದುಕಿನ ವಾಸ್ತವ ತಿಳಿಯದೆ,
ಹುಚ್ಚನಂತಾಗಿರುವನು ಮನುಜ..!
ಮಾಡಬಾರದನ್ನೇ ಮಾಡುತ್ತಿರುವ,
ತಪ್ಪುಗಳ ರಾಶಿಯನು ಹೊತ್ತಿರುವ,
ಮಾನವನ ಹೃದಯ ಅನಾಚಾರದ ಕನಜ..!

ಉರಿಯುವ ದೀಪವನ್ನೂ,
ನಂದಿಸಿ, ಆರಿಸಿ ಇವನು,
ಬೆಳಗುವ ಲೋಕವನ್ನೂ,
ಕತ್ತಲಿಗೆ ನೂಕಿದನು..
ಎದ್ದು ಹೊರಬರುವವರನ್ನೂ,
ನಿದ್ದೆಗೆ ಮರಳಿಸಿದನು..

ಮನುಜಾ..
ನಿನ್ನ ಹೃದಯವದೆಷ್ಟು ಕಠೋರ..
ಒಡೆದೆಯಾ ನೀ ಸ್ನೇಹ ಕುಠೀರ..!
ಜಗವು ಎಚ್ಚರವಾಗುತ್ತಿದ್ದುದು,
ನಿನ್ನ ಮನವನ್ನು ಚುಚ್ಚಿದೆಯೇ..?
ಮಾನವನ ಮನಸ್ಸೆಂಬುದು,
ಸ್ವಾರ್ಥತ್ವದ ತವರೂರೇ..?

★ http://suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!