ಜೇನುಗೂಡು..!

ಹೂವಿಂದ ಹೂವಿಗೆ ಹಾರುವ,
ಜೇನು ನೊಣವು ಮಕರಂದವನ್ನು ಹೀರಿ,
ಗೂಡಿನೊಳಗೆ ಒಟ್ಟಾಗಿಸುತ್ತಿತ್ತು..
ತನ್ನೊಡಲಿನಿಂದ ಹುಟ್ಟಿಬಂದ,
ಮರಿ-ಮಕ್ಕಳಿಗೆ ಹಂಚಲೆಂದು..

ಆಲದ ಮರದ ಮೇಲೆ ಜೇನ್ನೊಣಗಳು,
ಕಟ್ಟಿಕೊಂಡಿದೆ ಭದ್ರವಾದ ಗೂಡು..
ಮುಟ್ಟಲು ಬಂದವನನ್ನು
ಚುಚ್ಚಿ ಕೊಲ್ಲುವೆಯೆಂದು ಝೇಂಕರಿಸುತ್ತಾ,
ಅವುಗಳೆಲ್ಲಾ ಆ ಸಿಹಿ ಕೋಟೆಗೆ,
ಕಾವಲಾಗಿ ನಿಂತಂತಿದೆ..

ಜಗಕೆ ಸಿಹಿಯನ್ನು ಪಸರಿಸುವ,
ನಿತ್ಯ ಕಾಯಕ ನೊಣದ್ದು..
ಪುಷ್ಪ-ಪುಷ್ಪಗಳ ಮೈ ಸವರಿ,
ಎಳೆಯ ಹನಿಯನ್ನು ಎತ್ತಿಕೊಂಡು,
ಗೂಡಿನೊಳಗೆ ಅಡಗಿಸಿಡುತ್ತದವುಗಳು..

ಹಾಡುವ ಆ ಝೇಂಕಾರದಲ್ಲೂ,
ಸಂತೋಷದ ಸಂದೇಶವಿದೆಯೇನೋ..
ಹಸಿದ ಹೊಟ್ಟೆಗೆ ಸಾಂತ್ವನವಾಗುವ,
ಜೇನಿನಲ್ಲೂ ಸಮೃದ್ಧಿಯಿದೆ..
ನೊಣಗಳನ್ನು ಹೊಗೆಯಿಟ್ಟು ಓಡಿಸಿ,
ಕದಿಯುವ ಚಳಕದಲ್ಲೂ ಭಾವವಿದೆ..

ಆ ಸಣ್ಣ ಶರೀರವನ್ನಿಟ್ಟುಕೊಂಡು,
ಹೆಣೆಯುವ ಗೂಡಿನ ವಿನ್ಯಾಸ..!
ಮನುಷ್ಯ ಜಾತಿಯಲಿ ಜನಿಸಿದವನಿಗೆ,
ಜನ್ಮ-ಜನ್ಮಾಂತರದಲ್ಲೂ ಅಸಾಧ್ಯ ಮಾತು..!
ಮರದ ಕೊಂಬೆಯಲಿ ಆ ಗೂಡು,
ಕೋತಿಯಂತೆ ನೇತಾಡುತ್ತಲಿತ್ತು..

ಅಲ್ಲೊಂದು ಅರಿವಿದೆ..
ನೊಣದ ಕಲೆಯ ಜಗವು ಗುರುತಿಸಿದೆ..
ಈ ನೊಣದ ಹಂಬಲದ ಕಾಯಕವಿಂದು,
ಕವಿಯ ಕವನವಾಗಿದೆ..
ಅರ್ಥವಿಲ್ಲದ ಬರಹದ ಮುಂದೆ,
ಜೇನು  ಸಾಹಿತ್ಯವನ್ನೂ ಸಿಹಿಯಾಗಿಸಿದೆ..

-----------------------
#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!