ನಾವಿಲ್ಲಿ ಯಾತ್ರಿಕರು..
ನಾಳೆ ಮುಗಿಯುವ ಈ ವಿಶ್ವದಲ್ಲಿ,
ನಲಿದಾಡುವ ನಾವೆಲ್ಲಾ ಯಾತ್ರಿಕ..
ಮೂರು ದಿನಗಳ ಈ ಬದುಕಿನಲ್ಲಿ,
ಮನುಜನಾಗುತ್ತಿದ್ದಾನೆ ಮಾಂತ್ರಿಕ..
ನಾಳೆಯ ಬಗ್ಗೆ ತಿಳಿಯದ ನಾವಿಲ್ಲಿ,
ಭಾವಿಸಿರುವೆವೋ ಇದು ಶಾಶ್ವತ..!
ಇಂದಲ್ಲದಿರೆ ನಾಳೆಯೊಂದು ದಿನ,
ಮರಳಿ ಹೋಗಲೇಬೇಕದು ನಿಶ್ಚಿತ..
ನಮ್ಮೀ ಜೀವನದ ಯಾತ್ರೆಯಲ್ಲಿ,
ಈ ವಿಶ್ವವು ಒಂದು ಸಣ್ಣ ನಿಲ್ದಾಣ..!
ಮತ್ತೆ ನಾವು ಅಲ್ಲಿಗೇ ತೆರಳಬೇಕು,
ಎಂಬುದು ಮೇಲಿನವನ ವಾಗ್ಧಾನ..
ಭೂಮಿಯೆಂಬೀ ತಂಗುದಾಣದಲ್ಲಿ,
ಮಾನವನಾಗುತ್ತಿದ್ದಾನೆ ಅಹಂಕಾರಿ..
ಆಸೆ, ಅಭಿಲಾಷೆಗಳನ್ನೆಲ್ಲಾ ಇವನು,
ಮಡಿಲಲ್ಲಿ ಕಟ್ಟುವನು, ಎಲ್ಲೆ ಮೀರಿ..
ಅರಸನಾದವನೂ, ಆಳಾದವನೂ,
ಮರಳಬೇಕಾದ ಜಗತ್ತದು ಒಂದೇ..
ತಯ್ಯಾರುಗೊಳ್ಳಬೇಕು ನಾವೆಲ್ಲಾ,
ಆ ಲೋಕಕ್ಕೆ ಮರಳಲು ಇಂದೇ..
ಯಾತ್ರಿಕನಾಗಿ ನಮ್ಮೆಲ್ಲರ ಇಲ್ಲಿಗೆ
ಕಳುಹಿದನು ಅವನು ಪರಮಾತ್ಮ..
ಇನ್ನಾದರೂ ಎಚ್ಚರವಾಗೆದ್ದೇಳಲಿ,
ಮನಸ್ಸಿನ ಒಳಗಿರುವ ನಮ್ಮಾತ್ಮ..
🔵 http://suwichaar.blogspot.in 🔵
✍ ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou