ನಾನೇಕೆ ಬರೆಯುತ್ತೇನೆ..?

ನಾನು ಬರೆಯುತ್ತೇನೆ..
ಭಾವನೆಗಳನ್ನು ಬಿತ್ತರಿಸಲು,
ಭಿನ್ನತೆಗಳನ್ನು ಕತ್ತರಿಸಲು,
ಸಂಶಯಗಳಿಗೆ ಉತ್ತರಿಸಲು..

ನಾನು ಬರೆಯುತ್ತೇನೆ..
ಸಂಬಂಧಗಳನ್ನು ಬೆಳೆಸಲು,
ಪ್ರೀತಿಯನ್ನು ಉಳಿಸಲು,
ಕೆಟ್ಟದ್ದನ್ನು ಅಳಿಸಲು..

ನಾನು ಬರೆಯುತ್ತೇನೆ..
ಸಮಯವನ್ನು ಸಾಧಿಸಲು,
ಜ್ಞಾನವನ್ನು ವೃದ್ಧಿಸಲು,
ಅನ್ಯಾಯವನ್ನು ಛೇದಿಸಲು..

ನಾನು ಬರೆಯುತ್ತೇನೆ..
ಚಿಂತನೆಯು ಹೆಚ್ಚಲು,
ಸ್ನೇಹ ಹಣತೆ ಹಚ್ಚಲು,
ಮನಸ್ಸನ್ನು ಬಿಚ್ಚಲು..

ನಾನು ಬರೆಯುತ್ತೇನೆ..
ಏನಾದರೊಂದು ಮಾಡಲು,
ಗೆಳೆಯರ ಜೊತೆಗೂಡಲು,
ಸಮಾಧಾನ ಕೂಡಿಡಲು..

★ suwichaar.blogspot.in ★

# ಹಕೀಂ ಪದಡ್ಕ.,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!