ಕಪ್ಪು ಮೋಡ ಮತ್ತು ಹೃದಯ..

ಕರಿಮೋಡದೊಳಗಿಂದ
ಸುರಿಯುವ
ಮಳೆಹನಿಯು
ಕಪ್ಪಲ್ಲ..
ಕರಿದ ಹೃದಯದಲ್ಲಿ
ಬಣ್ಣದ ಬೇಧವಿದ್ದರೆ,
ಅದು ತಪ್ಪಲ್ವಾ..?

ಭುವಿಗೆ ಬಿದ್ದ
ಮಳೆ ನೀರು
ಕಲುಷಿತ ನೆಲವನ್ನು
ಶುಚಿಗೊಳಿಸಿತು..
ಆ ನೀರಿಂದ
ಹೃದಯದೊಳಗಿನ
ಕಲ್ಮಶ ಶುಭ್ರವಾಗುವುದೇ..?

ಮಳೆ-ಇಳೆಯ
ಸ್ನೇಹ ಸುಗಂಧವು
ವಿಶಾಲಗೊಂಡಿರುವ
ಆಗಸದಲ್ಲೂ ಪರಿಮಳಿಸಿತು..
ಎರಡು ಹೃದಯಗಳ
ದ್ವೇಷ ಸ್ವರೂಪಕ್ಕೆ
ಸ್ನೇಹಗಂಧವೂ ವಾಸನೆಯಾಯ್ತು..

ನಾನು, ನಾನೇ ಎಂಬ
ಹಮ್ಮಿನ ಬದುಕು
ಮಮ್ಮಿಯಾಗಬೇಕೆಂಬ
ಸತ್ಯವನ್ನೂ ಮರೆಮಾಚಿತು..
ನಿಮಿಷದ ಜೀವನದಲ್ಲಿ
ತಾನೇ ಸರ್ವಸ್ವನೆಂಬ
ಪುಕ್ಕಟೆ ಬಯಕೆಯೂ ಇತ್ತು..

ಮನುಜನಲ್ವಾ..?
ಬಯಕೆಗಳು ಏನೇನೋ
ಇರಬಹುದು..
ಎಲ್ಲವೂ ತನಗೆಂಬ
ಕನಸಿನಲ್ಲಿ ಆತ
ಇಹ-ಪರ ಜಗವೂ
ಮರೆತು ಹೋಗಬಹುದು..

★ http://suwichaar.blogspot.in

#ಹಕೀಂ ಪದಡ್ಕ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!