ವಿರೋಧಿ..

ಮುಂದೆ ನಡೆಯುವವನನ್ನು
ಹಿಂದಕ್ಕೆ ಎಳೆಯುತಿದ್ದ
ಆತನ ವಿರೋಧಿ...!
ಆದರೂ
ಯಶಸ್ಸೇ ಆಗಿತ್ತು
ಆತನ ವಿಧಿ...!
-----------------------------
ಒಳ್ಳೆಯ ಕಾರ್ಯಗಳನ್ನು
ವಿರೋಧಿಸುವುದೇ ಆಗಿತ್ತು
ಆತನ ಹವ್ಯಾಸ..
ಬದುಕಿನ ಸಾಧನೆಗೆ
ಕುತ್ತು ತಂದಿತು
ಆತನ ಈ ದುರಾಭ್ಯಾಸ..
-----------------------------
ಎಲ್ಲಾ ಪದಗಳಿಗೂ ಬೇಕು
ವಿರುದ್ಧ ಪದ..
ವಿರೋಧಿಗಳಿಂದಲೇ ತೆರೆಯಲ್ಪಡುವುದು
ಸಾಧನೆಯ ಕದ..
-----------------------------
ತನ್ನ ಶತ್ರುವನ್ನು ದೂರಿ
ಏನೇನೋ ಆತ
ಗೀಚುತ್ತಿದ್ದ..
ತಾನು ಏನು, ಹೇಗೆ
ಎಂಬುದನ್ನು ವಿಮರ್ಶಿಸಲು
ಆತ ಮರೆತಿದ್ದ..

~~~~~~~~~~~
# ಹಕೀಂ. ಪದಡ್ಕ
~~~~~~~~~~~

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!