ಬೆವರು..
ದುಡಿದು ಉಣ್ಣುವ
ಆತನ ಹಣೆಯಲ್ಲಿ
ಇಳಿಯುತಿತ್ತು ಬೆವರು..
ಹಾಯಾಗಿ ಮಲಗುವ
ಶ್ರೀಮಂತನ ಮನೆಯಲ್ಲಿತ್ತು
ಸ್ನಾನಕ್ಕೆ ತಣ್ಣೀರಿನ ಶವರು..
-----------------------
ಶ್ರಮಪಟ್ಟದ್ದರಿಂದ
ಬೆವರಿ ಬೆವರಿ ಆತನ
ಶರೀರವಿಡೀ ಆಗಿತ್ತು ಒದ್ದೆ..
ಹೌದು, ಆತನ ಭವಿಷ್ಯದ
ಬದುಕನ್ನು ನಿರ್ಣಯಿಸುವುದೇ
ಆ ಸಣ್ಣ ಗದ್ದೆ..
-----------------------
ಹೊಲದಲ್ಲಿ ದುಡಿಯುತ್ತಾ
ಬೆವರು ಸುರಿಸುವ
ಆತನೊಬ್ಬ ಬಡ ರೈತ..
ಮಡದಿ, ಮಕ್ಕಳ
ಬಾಳನ್ನು ಬೆಳಗುವತ್ತ
ಈತನ ಚಿತ್ತ..
-----------------------
ನೆಲವ ಅಗೆದು
ಬೀಜವನ್ನು ಬಿತ್ತಿ
ಮಾಡುವನು ಬೇಸಾಯ..
ಸಿಕ್ಕಿದ ಅಲ್ಪದ
ಫಲಿತಗಳೇ
ಈತನ ಜೀವನದ ಆದಾಯ..
~~~~~~~~~~~~~~
# ಹಕೀಂ. ಪದಡ್ಕ
~~~~~~~~~~~~~~
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou