ವರದಕ್ಷಿಣೆ..
ವಯಸ್ಸು ಮೀರಿದ ಹೆಣ್ಣು
ಇನ್ನೂ ಮನೆಯಲ್ಲೇ ಉಳಿದಿತ್ತು..
ವರದಕ್ಷಿಣೆಯೆಂಬ ಪಿಶಾಚಿಯೇ
ಇದಕ್ಕೆ ಮೂಲ ಕಾರಣವಾಗಿತ್ತು..
ಮಗಳ ಮದುವೆ ನಡೆಸಿ ಕೊಡಲು
ಆ ತಂದೆ ಊರಿಡೀ ಅಲೆದಾಗಿತ್ತು..
ಮಸೀದಿಯಂಗಲದಲ್ಲಿ ಕೈಚಾಚಿ ಪಡೆದಿದ್ದು
ಒಂದು ಅಂಗುಲಕ್ಕೂ ಬಾರದ್ದಾಗಿತ್ತು..
ಸಾಲ ಮಾಡಿ ಆ ಬಡ ತಂದೆ
ಮತ್ತೆ ಒಂದಷ್ಟು ಕೂಡಿಸಿದ..
ಸಾಲದೇ ಇದ್ದಾಗ ಗಂಡಿನವರು
ಮದುವೆ ಬೇಡವೆಂದು ಹೇಳಿ ಹೋದ..
ಹೆಣ್ಣು ಹೆತ್ತ ನಮಗ್ಯಾಕೆ ಈ ಕಷ್ಟ..!
ಹೆತ್ತ ತಾಯಿಯ ರೋಧನ..!!
ಹೆಣ್ಣಾಗಿ ಹುಟ್ಟಿದ್ದು ತಪ್ಪಾಯಿತೇ..?
ಹೆಣ್ಣಿನ ಮನದೊಳಗಿನ ವೇಧನ..
ವರದಕ್ಷಿಣೆ ಪಡೆದ ಮದುವೆಯಲ್ಲಿ
ತಂದೆಯ ಬೆವರ ಹನಿಯೂ ಸೇರಿದೆ..
ಹಣಕ್ಕಾಗಿ ಸಹಿಸಿದ ಸಂಕಷ್ಟಗಳು
ತಾಯಿಯ ಕಣ್ಣೀರಲ್ಲಿ ಬೆರೆತಿದೆ..
ಈ ಜಗತ್ತು ಯಾಕೆ ಇಷ್ಟೊಂದು ಕೆಟ್ಟಿದೆ..?
ಹೆಣ್ಣನ್ನು ಕೊಡುವಾಗ ಹಣವಾದರೂ ಯಾಕೆ..?
ಹೆಣ್ಣಿಗಿಂತ ಹಣ ನಿನಗೆ ಮೊದಲಾಗಿದ್ದರೆ,
ಹಣವನ್ನೇ ಜೊತೆಯಾಗಿಸಿ ಸುಖಿಸಬಾರದೇಕೆ..?
ಬಡ ಹೆಣ್ಣು ಹೆತ್ತವರ ಹೃದಯಕ್ಕೆ ಕೈಹಾಕಿ,
ಯಾಕಯ್ಯಾ ಬೇಕು ನಿನಗೆ ಹಣ-ಚಿನ್ನ..?
ಬರಿಗೈಯಲ್ಲಿರುವ ಹೆಣ್ಣನ್ನು ಸ್ವೀಕರಿಸಿ,
ಸುಖವಾಗಿದ್ದರೆ ಎಷ್ಟೊಂದು ಚೆನ್ನ..?
ಅವಳ ಹೆತ್ತವರ ಶಾಪ ಪಡೆದು
ನಿನಗೆ ಹೆಣ್ಣು ಬೇಕೇ ಬೇಕಾ..?
ಅವಳ ಮೇಲೆ ಒತ್ತಡ ಹೇರಿ ನಿನಗೆ
ಹಣವನ್ನು ಪಡೆಯಲೇ ಬೇಕಾ..?
ದೀನ್ ನಿಷೇಧಿಸಿದ ವರದಕ್ಷಿಣೆಯ ಪಡೆದು,
ನಿನ್ನ ಮದುವೆಯಲ್ಲಿ ಸಿಗುವುದೇ ಬರಕತ್..?
ದಾರಿದ್ರ್ಯ ಬದುಕಲ್ಲಿ ಆ ಹೆಣ್ಣು ಎಷ್ಟೊಂದು
ಸಹಿಸುವಳೋ ಇವನ ಈ ದೌಲತ್..?
ಇನ್ನಾದರೂ ಯೋಚಿಸು ಗೆಳೆಯಾ..
ವರದಕ್ಷಿಣೆ ಬೇಡ ಹೇಳು ಗೆಳೆಯಾ..
ಬರಿಗೈಯಲ್ಲಿ ಬಂದ ಆ ಬಡ ಹೆಣ್ಣಿಗೆ
ಆಶ್ರಯ ಕಲ್ಪಿಸು ಓ ನನ್ನ ಗೆಳೆಯಾ..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou