ಏಕಾಂಗಿ ನಾನು..
ಜೀವನ ಪೂರ್ತಿಯೂ
ಜೊತೆಯಿರುವ ಭರವಸೆಯಲ್ಲಿ
ನಾನಂದು ನಿನ್ನೊಡನೆ
ಸ್ನೇಹವನ್ನು ಹಂಚಿಕೊಂಡಿದ್ದೆ..
ನನ್ನ ಎದೆಯೊಳಗೆ
ನಿನಗಾಗಿಯೇ ಒಂದು ದೊಡ್ಡ
ಅರಮನೆಯ ಕಟ್ಟಿ
ನಾನು ನಿನ್ನನ್ನು ಕಾಯುತ್ತಿದ್ದೆ..
ಜೊತೆಗಾರ್ತಿ ನೀನಾದರೆ,
ಬದುಕು ಬಂಗಾರವಾಗುವುದಂಬ
ನಂಬಿಕೆಯೊಳು ನಾನು
ಬದುಕು ಸಾಗಿಸುತ್ತಿದ್ದೆ ನಾನಂದು..
ಪ್ರೀತಿ ಕಡಲಲ್ಲಿ ಮಿಂದು
ಜೀವನವನ್ನು ನಗೆಯಲ್ಲಿರಿಸಲು
ನೀನು ಸಮರ್ಥಳೆಂದು
ನಾನು ನಿನ್ನನ್ನು ಬಯಸುತ್ತಿದ್ದೆ..
ಹಂಚಿಕೊಂಡ ಪ್ರೀತಿಯೆಲ್ಲವೂ
ನಾಟಕವಾಗಿತ್ತೆಂಬ ವಾರ್ತೆಯು
ನನ್ನ ಕಿವಿಯೊಳಗೆ ಹೊಕ್ಕಾಗ
ನಾನಂದು ತುಂಬಾ ನೊಂದಿದ್ದೆ..
ಬಯಸಿ ಬಂದದ್ದು ಪ್ರೀತಿಯಲ್ಲ
ಎಂಬ ಸತ್ಯವು ತಿಳಿದಾಗ ನನ್ನ
ಹೃದಯದ ಬಡಿತವೂ ಹೆಚ್ಚಿ
ಜೀವನ ಸುಸ್ತಾಗಿ ಹೋಗಿತ್ತು..
ಮೋಸದಾಟದ ಸ್ನೇಹವ ನಂಬಿ
ನಾನಂದು ಅನುಭವಿಸಿದ
ಕಷ್ಟ-ನಷ್ಟಗಳನ್ನು ಮತ್ತೊಮ್ಮೆ
ನಾನೆಂದೂ ಬಯಸಲಾರೆ..
ಸ್ನೇಹ ನಟಿಸಿ
ಓಡಿ ಹೋಗುವ ಹೆಣ್ಣನ್ನು
ನಾನಿನ್ನೊಂದು ಬಾರಿಯೂ
ನಂಬಲಾರೆ..
ಇನ್ನು ಇದು ಏಕಾಂಗಿ ಬದುಕು..
ಜೊತೆಗಾರರ ತ್ಯಜಿಸಿ,
ಪ್ರೀತಿಯಿಂದ ವಿರಮಿಸಿ
ನನ್ನದು ಇದು ಏಕಾಂಗಿ ಬದುಕು..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou