ಬರಹ ಕಳ್ಳರು..
ಬರಹಗಾರನೊಬ್ಬ
ಕಷ್ಟಪಟ್ಟು ಬರೆದು,
ಹರಿಯ ಬಿಟ್ಟಿದ್ದನು
ಹಲವು ಬರಹಗಳ..
ಇಲ್ಲದ ಸಮಯವ
ಹೊಂದಿಸಿಕೊಂಡು,
ಚಿಂತಿಸಿ, ಯೋಚಿಸಿ
ಆತನದು ಬರೆದಿದ್ದ..
ನಾಲ್ಕು ಮಂದಿಯ
ಪ್ರೋತ್ಸಾಹಗಳೊಂದಿಗೆ
ತಾನೊಬ್ಬ ಅತ್ಯುತ್ತಮ
ಬರಹಗಾರನಾಗಬೇಕೆಂದಿದ್ದ..
ತಾನು ಬರೆದ ಬರಹಗಳನ್ನೆಲ್ಲ
ಸಾಮಾಜಿಕ ತಾಣಗಳಲ್ಲೆಲ್ಲ
ಪ್ರಕಟಿಸಿ ಸಂತುಷ್ಟನಾಗಿದ್ದ..
ಸ್ವಲ್ಪ ಸಮಯ ಬಳಿಕ
ತನ್ನದೇ ಬರಹವೊಂದು
ಇನ್ನೊಬ್ಬನ ಹೆಸರಿನೊಂದಿಗೆ
ಪುನಃ ಅವನಿಗೆ ಕಾಣಲ್ಪಟ್ಟಾಗ,
ಅಯ್ಯೋ ನಾನಿಷ್ಟು ಕಷ್ಟಪಟ್ಟಿದ್ದು,
ಈ ನಾಲಾಯಕ್ಕರಿಗೆ ನಕಲಿ
ಮಾಡಿ ಹರಿಯಬಿಡಲೋ...?
ಎಂದು ಕರುಳು, ಕಿತ್ತು ಹೇಳಿತು..
ತಡೆಯಲಾರದ ದುಃಖವು
ಆತನೊಳಗೆ ಉಕ್ಕಿ ಬಂತು..
ಬರೆಯಲು ಬಾರದವರು ಯಾಕೆ
ಈ ರೀತಿ ಕದಿಯುವರು..?
ಎಂಬ ಪ್ರಶ್ನೆ ಆತನೊಳಗೆ ಮೂಡಿತು..
ಬರಹಗಳ ಕದ್ದು, ತನ್ನ ಹೆಸರಿನಲ್ಲಿ
ಪ್ರಕಟಿಸುವ ವಿಕಾರಿಗಳು ಇವರು..
ಸಾಹಿತ್ಯಕ್ಕೆ ವಂಚನೆ ಮಾಡುವ
ಈ ಮೂರ್ಕಾಸಿನ ಕೃತ್ಯವನ್ನು
ನಾವೆಲ್ಲರೂ ಸೇರಿ ವಿರೋಧಿಸೋಣ..
ಸಾಹಿತ್ಯ ಲೋಕವನ್ನು ಶುಚಿಯಾಗಿಡೋಣ..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou