ಧಮನಿತರ ಧ್ವನಿ; ಪಿ.ಎಫ್.ಐ...

ಈ ದೇಶದಲ್ಲಿ ಸ್ವಾತಂತ್ರ್ಯ, ನ್ಯಾಯ, ರಕ್ಷಣೆ,
ಉಳಿಸಿಕೊಳ್ಳುವುದು ಪಿ.ಎಫ್.ಐ ನ ಧ್ಯೇಯ..
ಸಮಾಜದಲ್ಲಿ ಎಂದೂ ಆಗಲು ಬಿಡಲಾರರು,
ಬಡವರಿಗೆ, ಶೋಷಿತರಿಗೆ, ಭಯ & ಅನ್ಯಾಯ..

ದೇಶದ ರಕ್ಷಣೆಗೆ ಸದಾ ಸಿದ್ಧರಾಗಿ ನಿಂತವರು,
ಪಿ.ಎಫ್.ಐ ನ ಕೆಚ್ಚೆದೆಯ ದೇಶಪ್ರೇಮಿ ವೀರರು..
ಅನ್ಯಾಯ,ಅಕ್ರಮದ ವಿರುದ್ಧ ಸಿಡಿದೆದ್ದು ನಿಲ್ಲುವ,
ಭಾರತದ ರಕ್ಷಕರಾದ ಧೈರ್ಯಶಾಲಿ ಶೂರರು..

ಸರ್ವ ರಂಗದಲ್ಲಿಯೂ ಗುರುತಿಸಿಕೊಂಡಿರುವ,
ಪಿ.ಎಫ್.ಐ. ಬಡ ಹಾಗೂ ಶೋಷಿತರ ಬಂಧು..
ದೇಶವನ್ನು  ಭಯೋತ್ಪಾದನೆಯ ಕೈಗಳಿಂದ
ಬೇರ್ಪಡಿಸಲು ಪ್ರಯತ್ನ ನಡೆಸುತ್ತಿದೆ ಇಂದು..

ಇಂದಿನವರೆಗೂ ಎಲ್ಲೂ ಒಂದೆಡೆ ಪಿ.ಎಫ್.ಐ
ಯಾರಿಗೂ ಮಾಡಲಿಲ್ಲ ಅನ್ಯಾಯ - ಅಕ್ರಮ..
ದೇಶಕ್ಕೆ, ಜನತೆಗೆ ಕೇಡು ಬಗೆದವರಿಗೆಲ್ಲರಿಗೂ
ಕೈಗೊಳ್ಳಲು ಬಲ್ಲರು ಇವರು ತಕ್ಕುದಾದ ಕ್ರಮ..

ಅಂತ್ಯ ದಿನದವರೆಗೂ ಸಮಾಜಕ್ಕೆ ಸೇವೆಯನ್ನು
ಅರ್ಪಿಸುತ್ತಲೇ ಉಳಿದುಕೊಳ್ಳಲಿ ಪಿ ಎಫ್ ಐ..
ಧಮನಿತ ಧ್ವನಿಯಾಗಿ, ದೇಶಕ್ಕೆ ಕಾವಲಾಗಿರುವ
ಈ ಪಿ ಎಫ್ ಐ ಗೆ ಹೇಳೋಣ ನಾವೆಲ್ಲರೂ ಜೈ..

''ಸರ್ವರಿಗೂ ಪಾಪ್ಯುಲರ್ ಫ್ರಂಟ್ ಡೇ ಯ ಹಾರ್ದಿಕ ಶುಭಾಶಯಗಳು..''

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!