ಕಸ್ತೂರಿ ಸುಗಂಧ..
ಕಾಗೆಯೊಂದು ಮರವೇರಿ ಕುಳಿತಾಗ
ಕರಿಬಣ್ಣವೆಂದು ಮರವು
ಕಾಲು ಹಿಡಿದು ಎಸೆಯಲಿಲ್ಲ..
ಕರಿಯರು ಬಿಳಿಯರೆಂಬ
ಕಚ್ಚಾಟವು ಜನರ ಮಧ್ಯೆ
ಕೊನೆಗೊಳ್ಳಲೇ ಇಲ್ಲ..
ಸಜ್ಜನರೊಂದಿಗೆ ನಾವು
ಸಹವಾಸ ಮಾಡಿದರೆ
ಸಹಕಾರಿಯಾಗದಿರದು..
ಸಜಾತಿ, ವಿಜಾತಿಯೆಂದು
ಸಮಾಜವನ್ನು ವಿಂಗಡಿಸಿದರೆ
ಸ್ನೇಹವೂ ಮಾರಟವಾಗುವುದು..
ಕೂತು ಉಣ್ಣುವಾಗ ತಟ್ಟೆ, ಕೈಯಲ್ಲಿ
ಕೊಳೆಯಿದ್ದರೆ ನಾವು ಅದನ್ನು
ಕಂಡು ಹಿಡಿದು ಶುಚಿಗೊಳಿಸಬೇಕು..
ಕೈಹಿಡಿದು ಬಂದ ಗೆಳೆಯನದ್ದು
ಕಠೋರ ಮನಸ್ಸಾಗಿದ್ದರೂ ನಾವು
ಕರಗಿಸಿ ಪ್ರಶಾಂತಗೊಳಿಸಬೇಕು..
ಸುಗಂಧ ಬೀರುವ
ಸಂಪಿಗೆ ಹೂವೊಂದು
ಸುಂದರವಾಗಿ ಅರಳುವುದು..
ಸಹೃದಯಿಯ ಮನದಲ್ಲಿ
ಸತ್ಕರ್ಮಗಳೆಲ್ಲವೂ
ಸದಾಕಾಲ ಉಳಿಯುವುದು..
ಕಲ್ಪನೆಗೆ ನಿಲುಕದ
ಕಾಯದಲ್ಲೂ ನಾವು
ಕಲೆಯನ್ನು ಕಾಣಬಲ್ಲೆವು..
ಕಣ್ಣ ಮುಂದಿರುವ
ಕಲಾವಿದನನ್ನು ಗುರುತಿಸುವುದು
ಕಷ್ಟವೆಂದು ತಿಳಿಯುವೆವು..
ಸನ್ಮಾರ್ಗದಲ್ಲಿಯೇ
ಸಾಗುತ್ತಾ ನಾವು
ಸತ್ಯವನ್ನರಿಯಬೇಕು..
ಸರಿಯಲ್ಲದ ವಿಚಾರಗಳನ್ನು
ಸರಿಸಿ ದೂರವಿರಿಸಿ
ಸಜ್ಜನನಾಗಿ ಬೆಳೆಯಬೇಕು..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou