ಆರೋಗ್ಯ..
ಉತ್ತಮವಾದ ರೀತಿಯಲ್ಲಿ ಜೀವಿಸಲು
ಬೇಕಿದೆ ನಮಗೆ ಒಳ್ಳೆಯ ಆರೋಗ್ಯ..
ರೋಗದಿಂದ ನಾವು ಮುಕ್ತಿಯಾದರೆ
ಅದುವೇ ನಮಗೆ ಒಲಿದ ಮಹಾಭಾಗ್ಯ..
ಆಹಾರ ಸೇವನೆಯಲ್ಲಿನ ವ್ಯತ್ಯಾಸವು
ತಂದು ಕೊಡುವುದು ನಮಗೆ ರೋಗ..
ರೋಗಿಯಾದರೆ ಒಮ್ಮೆ, ಮತ್ತೆ ನಮಗೆ
ವೈದ್ಯರ ಬಳಿ ಹೋಗುವುದೇ ಯೋಗ..
ನಮ್ಮ ಶರೀರ ಹಾಳಾಗುತ್ತಿರುವುದು
ಬೇಡವಾದ ಪದಾರ್ಥಗಳನ್ನು ತಿಂದು..
ಒಮ್ಮೆ ಆರೋಗ್ಯ ನಷ್ಟವಾಗಿ ಹೋದರೆ
ಚೇತರಿಸಿಕೊಳ್ಳಲು ಕಷ್ಟವಿದೆ ಇಂದು..
ದೇಹ ಗಟ್ಟಿಮುಟ್ಟಾಗಲು ಪ್ರತಿದಿನವೂ
ಮಾಡಬೇಕು ನಾವೆಲ್ಲರೂ ವ್ಯಾಯಾಮ..
ಹಣ್ಣು-ಹಂಪಲುಗಳ ಸೇವನೆಯಿಂದ,
ಸುಸ್ಥಿತಿಯಲ್ಲಿರುವುದು ದೇಹದ ಆಯಾಮ..
ಮಾರಕ ರೋಗಗಳಿಗೆ ತುತ್ತಾದರೆ ನಾವು
ಸಂಭವಿಸಲೂ ಬಹುದು ನಮಗೆ ಸಾವು..
ಅನಾರೋಗ್ಯ ಬಂದಾಗ ಆಗುವ ನೋವು
ಮನಸ್ಸಿನಾಳಕ್ಕೂ ತಲುಪುವುದು ಕಾವು..
ಯಾ ಅಲ್ಲಾಹ್.. ನೀನು ನಮಗೆಲ್ಲರಿಗೂ
ಹೆಚ್ಚಿಸು ರೋಗ ನಿರೋಧಕ ಶಕ್ತಿಯನ್ನು..
ನಮಗೂ, ನಮ್ಮವರಿಗೂ ನೀಡು ನೀನು,
ಮಾರಕ ರೋಗಗಳಿಂದ ಮುಕ್ತಿಯನ್ನು..
suwichaar.blogspot.in
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou