ಯುವಕರೇ.. ನಿಮ್ಮ ವಾಹನದ ವೇಗದಲ್ಲಿ ಮಿತಿಯಿರಲಿ..

ಇಂದು ದಿನಪತ್ರಿಕೆಗಳು, ನ್ಯೂಸ್ ಚಾನಲ್ ಗಳನ್ನು ತೆರೆದರೆ ಸಾಕು, ಎಲ್ಲೆಂದರಲ್ಲೂ ರಸ್ತೆ ಅಪಘಾತದ ಬಗ್ಗೆ ನ್ಯೂಸ್ ಹರಿಯುತ್ತಲೇ ಇರುತ್ತದೆ. ರಸ್ತೆ ಅಪಘಾತದಲ್ಲಿ ಪ್ರಾಣಹಾನಿ ಹಾಗೂ ವಾಹನ ಹಾನಿ ಉಂಟಾದ ವಾರ್ತೆಗಳು ಪ್ರಸಾರವಾಗುತ್ತಲೇ ಇದೆ. ಈ ರಸ್ತೆ ಅಪಘಾತದಲ್ಲಿ ತನ್ನ ಅಂಗಗಳು ಯಾ ಶರೀರದ ಭಾಗಗಳನ್ನು ಕಳೆದುಕೊಂಡು ಆಸ್ಪತ್ರೆ ಅಥವಾ ಮನೆಯಲ್ಲಿ ಹಾಸಿಗೆ ಹಿಡಿದು ಹೊರಳುತ್ತಿರುವವರನ್ನು ಕಾಣುವಾಗ ಕರುಳು ಹಿಂಡಲ್ಪಡುತ್ತದೆ. ಕಣ್ಮುಂದೆ ಒಂದು ಆಕ್ಸಿಡೆಂಟ್ ನಡೆದು ಒಬ್ಬ/ಹಲವರು ಸಾವು/ಗಾಯಗಳಿಗೆ ಶದಣಾಗುವುದನ್ನು ನೋಡುವಾಗ ಮನಸ್ಸು ಬಿಕ್ಕಿ ಬಿಕ್ಕಿ ಅಳುತ್ತದೆ. ಇಂದು ಅದೆಷ್ಟು ಜನರು ಅಪಘಾತಗಳನ್ನು ಎದುರಿಸಿ ಹಾಸಿಗೆಯಲ್ಲಿ ಮಲಗಿದ್ದಾರೆ..?

ಇಂದು ಅಪಘಾತದಲ್ಲಿ ಮರಣ ಹೊಂದುವವರು ಹಾಗೂ ಗಾಯಗೊಳ್ಳುವವರ ಪೈಕಿ ಯುವಕರೇ ಹೆಚ್ಚು. ಕೈಗೆ ಬೈಕ್/ಕಾರೊಂದರ ಕೀ ದೊರೆತರೆ ಸಾಕು. ಮತ್ತೆ ಅವರು ಹೋಗುವ ವೇಗ ವಾಯುವಿಗಿಂತಲೂ ವೇಗವಾಗಿ. ನಮ್ಮ ಈ ಸವಾರಿಯಲ್ಲಿ ಮುಂದಿನ ವಾಹನ ಯಾವುದಾಗಿರಬಹುದು ಎಂಬುದನ್ನು ಯೋಚಿಸುವಷ್ಟು ತಾಳ್ಮೆ ಇವರಿಗಿರುವುದಿಲ್ಲ. ನಾಲ್ಕು ಜನರ ಮುಂದೆ ನಾನೊಬ್ಬ ಹೀರೋ ಆಗಬೇಕು ಎಂದು ಬರಸಿ ನಡೆದವನು, ಮರಳುವಾಗ ಝೀರೋ ಆಗಿರುತ್ತಾನೆ. ಇದೆಲ್ಲವೂ ಅಲ್ಲಾಹನ ಪರೀಕ್ಷೆಗಳು . ಆದರೆ ಅದನ್ನು ಎದುರಿಸುವ ಶಕ್ತಿ ನಮಗಿರಬೇಕು. ತಾನಾಗಿಯೇ ಒಂದು ಆಪತ್ತನ್ನು ಎಳೆದು ತರಬಾರದು. ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ ಹಲವು ಜೀವಗಳು ತಮ್ಮ ಬದುಕನ್ನು ಪಣಕ್ಕಿಡಬೇಕಾಗುತ್ತದೆ. ಇದರಿಂದ ಹಲವಾರು ಕುಟುಂಬಗಳು ದಿಕ್ಕುಪಾಲಾಗುತ್ತದೆ. ರಸ್ತೆ ಅಫಘಾತದಿಂದ ಕೈ, ಕಾಲು ಹಾಗೂ ಇನ್ನಿತರ ಅಂಗಗಳು ನಷ್ಟಗೊಂಡಿರುವಂತಹ ಜನರು ತುಂಬಾನೇ ಇದ್ದಾರೆ. ಯಾರೋ ಒಬ್ಬ ಮಾಡಿದ ತಪ್ಪಿನಿಂದಾಗಿ ಹಲವಾರು ಜೀವಗಳು ಜೀವನ-ಮರಣದೊಡನೆ ಹೋರಾಟ ನಡೆಸುವಂತಾಗುತ್ತದೆ.

ಪ್ರೀತಿ-ಪ್ರೇಮದ ಸುಲಿಗೆಯಲ್ಲಿ ಸಿಕ್ಕಿಬಿದ್ದಿರುವ ಯುವಕರು, ತನ್ನ ಪ್ರಿಯತಮೆಯ ಮುಂದೆ ಒಬ್ಬ ದೊಡ್ಡ ವ್ಯಕ್ತಿಯಾಗುವ ಸಲುವಾಗಿ ತಮ್ಮ ವಾಹನಗಳನ್ನು ಮಿತಿಗಿಂತ ಹೆಚ್ಚಿನ ವೇಗದಲ್ಲಿ ಚಲಾಯಿಸಿ ಅಪಘಾತಗಳನ್ನು ತಾನೇ ಸ್ವತಃ ಆಹ್ವಾನಿಸುತ್ತಿದ್ದಾನೆ.

ಮರಣ ಯಾವತ್ತೂ ನಮ್ಮನ್ನು ಅಪ್ಪಿಕೊಳ್ಳಬಹುದು. ಆದರೆ, ಆ ಮರಣದವರೆಗಿನ ಜೀವನವನ್ನು ಸುಖವಾಗಿ ಕಳೆದುಕೊಳ್ಳಬಾರದೇಕೆ? ಎಲ್ಲವೂ ಅಲ್ಲಾಹನ ಇಚ್ಛೆಯಂತೆ ನಡೆಯುತ್ತಿರುವುದಾದರೂ ಅದನ್ನೆಲ್ಲ ಮಾಡುತ್ತಿರುವುದು ತಾನೇ ಹೊರತು ಇನ್ನೊಬ್ಬನಲ್ಲ. ಎಷ್ಟೇ ಅವಸರ ನಮಗಿದ್ದರೂ ನಾವು ತಾಳ್ಮೆಯಿಂದಿರಬೇಕು. 'ಅವಸರವೇ ಅಪಘಾತಕ್ಕೆ ಕಾರಣ' ಎಂಬುದನ್ನು ಅರಿತಿರಬೇಕು. ನಮ್ಮ ಬದುಕನ್ನು ಸುಂದರವಾಗಿಡಲು ನಾವೇ ಶ್ರಮಿಸಬೇಕು. ಬೈಕ್, ಕಾರು, ಜೀಪು ಇತ್ಯಾದಿ ವಾಹನಗಳು ಕೈಗೆ ಸಿಕ್ಕರೆ ಉಪಯೋಗಿಸಿಕೊಳ್ಳಬೇಕೆ ವಿನಃ ದುರುಪಯೋಗಪಡಿಸಿಕೊಳ್ಳಬಾರದು.

ಇತ್ತೀಚೆಗೆ ಕರ್ನಾಟಕ ಸರ್ಕಾರವು ಬೈಕ್ ಸವಾರರ ಸಂರಕ್ಷಣೆಗಾಗಿ 'ಹೆಲ್ಮೆಟ್ ಖಡ್ಡಾಯ' ನಿಯಮ ಹೊರತಂದಿದೆ. ಖಂಡಿತವಾಗಿಯೂ ಈ ನಿಯಮ ಸ್ವೀಕಾರಾರ್ಹವಾಗಿದೆ? ಇಂದು ನಡೆಯುತ್ತಿರುವ ಅಪಘಾತಗಳ ಪೈಕಿ ಹೆಚ್ಚಿನವು ಬೈಕ್ ಅಪಘಾತವಾಗಿದ್ದು, ಸಾವು-ನೋವುಗಳು ಅಪಾರವಾದ ಕಾರಣಕ್ಕೆ ಅದನ್ನು ತಡೆಯುವ ಸಲುವಾಗಿ ಹಾಗೂ ಬೈಕ್ ಸವಾರರ ತಲೆಗೆ ಹಾನಿಯುಂಟಾಗಿ ಸಾವು ಸಂಭವಿಸುವುದನ್ನು ತಡೆಗಟ್ಟಲು ಸರ್ಕಾರವು ಈ ನಿಯಮ ಕೈಗೊಂಡಿದೆ. ಇದು ಒಮ್ಮೆಗೇ ಎಲ್ಲರಿಗೂ ಕಿರಿಕಿರಿ ಅನ್ನಿಸುವುದಾದರೂ, ಇದು ಒಂದು ಅತ್ಯಂತ ಮಹತ್ತರವಾದ ವಿಚಾರವಾಗಿತ್ತದೆ.

ಆದುದರಿಂದ ಯುವಕರೇ.. ಏನೋ ಮಾಡಲು ಹೊಗಿ ಏನೋ ಆಗುವುದಕ್ಕಿಂತ ಮೊದಲು ಒಂದಲ್ಪ ತಾಳ್ಮೆಯಿದ್ದರೆ ಇದ್ದರೆ, ಸಣ್ಣಪ್ರಮಾಣದಲ್ಲಿ ಅಪಘಾತಗಳನ್ನು ತಪ್ಪಿಸಿಕೊಳ್ಳಬದು..
ಅಲ್ಲಾಹನು ನಮ್ಮೆಲ್ಲರನ್ನು ಕಾಪಾಡಲಿ..ಆಮೀನ್..

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!