ಪರರ ನೋವಲ್ಲಿ ಪರನ ಸಂತೋಷ ..
ಪರಸ್ಪರ ಜಗಳ ಮಾಡಲು ಕಾಯಬೇಡ..
ಪರರ ನೋವಿನಲ್ಲಿ ಸಂತೋಷ ಬೇಡ
ಪರಿಣಾಮ ಭೀಕರವೆಂದು ಮರೆಯಬೇಡ..
ಪರವಾಗಿ ಸುಳ್ಳಿನ ಕಂತೆ ಸುರಿಯಬೇಡ
ಪರಿಶುದ್ಧ ಹೃದಯವದು ನೋಯಿಸಬೇಡ
ಪರಿ ಪರಿಯಾಗಿ ಆ ಥರಾ ಕಾಡಬೇಡ..
ಪರಲೋಕ ಇದೆಯೆಬುಂದು ಮರೆಯಬೇಡ
ಪರಿಶುದ್ಧ ಇಸ್ಲಾಮಿಗೆ ವಿರುದ್ಧವಾಗಿರಬೇಡ..
ಪವಿತ್ರ ಜೀವನವನ್ನು ಕತ್ತಲಾಗಿಸಬೇಡ
ಪಾಪವ ಮಾಡುತ್ತಲೇ ಮರಣಿಸಬೇಡ..
ಪರರ ಸ್ವಂತಿಕೆಯನ್ನು ಕದಿಯಬೇಡ..
ಪರಿ ಪರಿಯಾಗಿ ಚಿತ್ರ ಹಿಂಸೆ ಬೇಡ
ಪಡೆಯಬಾರದನ್ನು ಪಡೆದುಕೊಳ್ಳಬೇಡ
ಪಟ್ಟವನ್ನು ಕಟ್ಟುವ ಹಂಬಲವೂ ಬೇಡ
ಪಠ್ಯ ಹೇಳುವವರ ತಿರಸ್ಕರಿಸಲೇಬೇಡ..
ಪಣತೊಟ್ಟು ಸುಳ್ಳುವಾದ ಮಂಡಿಸಬೇಡ..
ಪಕ್ಕದಲ್ಲಿರುವವರ ನೋವನ್ನು ಬಯಸಬೇಡ
ಪಕ್ಕಾ ಸಂತ್ಯವಂತನಂತೆ ನಟಿಸಬೇಡ..
ಪರಮ ದಯಾಳುವನ್ನು ಅಲ್ಲಗಲೆಯಬೇಡ
ಪರಲೋಕದ ಶಿಕ್ಷೆಗೆ ಗುರಿಯಾಗಬೇಡ..
suwichaar.blogspot.in
✍ ಬಿ.ಎಂ ಬೆಳ್ಳಾರೆ & ✍ ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou