ಅರಳಿದ ಹೂವಿನ ನೋವು..
ಅರಳಿದ ಹೂವೊಂದು
ಅತ್ತು ಹೇಳಿತು ನುಡಿಯೊಂದನು
ಅಂದವಾಗಿರುವೆನು ನಾನು
ಅರಮನೆಯ ಸಿಂಗರಿಸುವೆನು..
ಅನುದಿನವೂ ಸುತ್ತಮುತ್ತಲಲ್ಲಿ
ಅಪಾರ ಸುಗಂಧವ ನೀಡುವೆನು..
ಅರಳಿ ನಾನು ತಲೆಯೆತ್ತಿದಾಗ
ಅರಳುವುದು ಮಗುವಿನ ಮುಖವೂ..
ಅಡವಿಗೆ ಸೌಂದರ್ಯ ತುಂಬುವೆನು..
ಅಹಮ್ಮಿಲ್ಲದೆ ಪರಿಮಳ ಬೀರುವೆನು..
ಅದರಂತೆಯೇ ದುಂಬಿಗಳು ನನ್ನ
ಅರಸಿ ಹಾರಿ ಹಾರಿ ಬರುವುದು..
ಅಮಲು ಬುದ್ಧಿಯೊಡನೆ ಬರುವ
ಅವರು ಕೆಲವರು ನನ್ನನ್ನು ಕಿತ್ತು
ಅಂದಗೆಡುವರು, ನನ್ನ ಕೊಲ್ಲುವರು,
ಅತಿಯಾಗಿ ನನ್ನ ನೋಯಿಸುವರು..
ಅರಗಿಣಿಯೊಂದು ಹಾಡಲು,
ಅರಳಿ ನಿಂತು ಕೇಳಿಸುವೆನು..
ಅಂಧ ಮಾನವ ಬಂದು ನನ್ನ
ಅಸೂಯೆಯಿಂದ ಕಿತ್ತೆಸೆಯುವನು..
ಅಯ್ಯೋ ನನ್ನ ಗತಿಯೇ..
ಅಪಾರ ಪ್ರಮಾಣದಲ್ಲಿ
ಅಂದವಿದ್ದರೂ, ನನಗಿಲ್ಲ
ಅವಕಾಶವಿಲ್ಲಿ ಬದುಕಲು..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou