ನೆನಪು..
ಹಳೆಯ ನೆನಪುಗಳು
ಹುಳಿಯಾಗಿ ರುಚಿಸಲು,
ಹೊಸ ಅನುಭವಗಳು
ಕಹಿಯೆಂದು ತೋರಿತು..
ಸಿಹಿಯನ್ನು ಬಯಸಿಯೂ
ಕಹಿಯುಂಡು ಮರುಗಿ,
ನೆನಪುಗಳನ್ನು ಅಳಿಸಲು
ಮತ್ತೊಮ್ಮೆ ಶ್ರಮಿಸಿದೆ..
ಸಿಹಿಯಾಗದ ನೆನವುಗಳು
ಅಳಿಸಲಾರದಂತೆ ಅಂಟಿರಲು
ಒಂಟಿ ಜೀವನದಲ್ಲಿ ಆ
ನೆನಪುಗಳನ್ನೇ ಸಂಗಾತಿಯಾಗಿಸಿದೆ..
suwichaar.blogspot.in
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou