ವೀರನಿಗೆ ಸಾವಿರ ನಮನ

ದೇಶ ಕಾಯೋ ವೀರನಿಗೆ
ಜಾತಿ-ಧರ್ಮದ ಹಂಗಿಲ್ಲ..
ದೇಶ ಸೇವೆಯ ಮಾಡುವಲ್ಲಿ
ಧರ್ಮವ ಗುರುತಿಸಲ್ಪಡುವುದಿಲ್ಲ..

ಭಾರತದ ಮಣ್ಣಿಗೇ
ಹೊನ್ನಾಗಿ ಜನಿಸಿ,
ಮಣ್ಣಿನ ರಕ್ಷಣೆ ಮಾಡುತ್ತಲೇ
ಮಣ್ಣಾಗಿ ಮಡಿದರು..

ಧೀರನಾಗಿ, ಶೂರನಾಗಿ
ದೇಶ ಕಾಯೋ ಪೇದೆಯಾಗಿ
ಉಗ್ರರ ಹಂತಕನಾಗಿ
ಶಹೀದಾದರು ಇವರು..

ನಾಮ ಮುಸ್ಲಿಮನದ್ದು
ಸೇವೆ ಭಾರತದ್ದು
ಭಯೋತ್ಪಾದಕರೆಂದು ಬಿಂಬಿಸುವವರಿಗೆ
ದಿಟ್ಟ ಜವಾಬಿದು..

ಅಹಮದ್ ಅಲ್ತಾಫರೇ
ನಿಮಗಿದೋ ನಮನ
ಸರ್ವ ದೇಶ ಪ್ರೇಮಿಗಳ
ಹೃದಯ ತುಂಬಿದ ಸಲಾಂ..

ಸೇರಿಸಲಿ ಅಲ್ಲಾಹನು
ಸತ್ಕರ್ಮಗಳ ಸಾಲಿಗೆ..
ಇಷ್ಟದಾಸರಾಗಲಿ ನಾವೆಲ್ಲ
ಅಲ್ಲಾಹನ ಪಾಲಿಗೆ..

suwichaar.blogspot.in

#ಹಕೀಂ.ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!