ಗುಲಾಬಿ..

♡♥ಗುಲಾಬಿ♥♡

ಮಂಜಿನ
ಹನಿಯೊಂದು ಬಿದ್ದಾಗ
ಅಂಜಿ
ಅರಳಿದ ಗುಲಾಬಿಯೇ..

ಹೆದರಿದರೂ
ನಿನ್ನ ಸೌಂದರ್ಯವು
ಉದುರಿದರೂ
ಚಂದವಾಗೇ ಇರುವುದು..

ಕೆಂಬಣ್ಣವ
ಮೈಯೆಲ್ಲಾ ಉಟ್ಟು
ಕಂಪನ್ನು
ಸುತ್ತಲಿನೆಲ್ಲರಿಗೂ ಕೊಟ್ಟು,

ಜಗದ
ನಗುವಿಗೆ ಕಾರಣಳಾಗಿ
ಮೊಗದ
ನಲಿವು ತಾನೇ ಆಗಿ..

ನಗುಮುಖದ
ನೋಟವೊಂದರಲ್ಲೇ
ಮನವ
ಸೆಳೆಯುವ ವೈಯ್ಯಾರೀ..
ಓ ಕೆನ್ನನೆಯ ಗುಲಾಬೀ..♥♥♥

suwichaar.blogspot.in

#ಹಕೀಂ.ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!