ಅರಗಿಣಿ..
ಅರಗಿಣಿಯೇ ನಿನ್ನ ಸ್ವರವು
ಆಹಾ ಅದೆಷ್ಟು ಚೆಂದ ! !
ಇನಿಯೇ.. ನೀ ಕೂಗಿದಾಗ
ಈ ಮನಸ್ಸಿಗೇ ಆನಂದ ! !
ಉದ್ದ ಮರದ ಕೊಂಬೆಯಲಿ
ಊರಿರುವ ನಿನ್ನ ಪಾದವು
ಋಷಿಯ ಹೃದಯದಂತೆ
ಎಷ್ಟೊಂದು ಮುಗ್ಧವು.. !
ಏತಕೆ ನೀ ಹಾರಿಹೋದೆ,
ಐದು ನಿಮಿಷವೂ ನಿಲ್ಲದೇ..
ಒಮ್ಮೆ ನಿನ್ನ ಧ್ವನಿಯ ಕೇಳಲು
ಓಲೈಸುತಿದೆ ನನ್ನ ಕಿವಿಗಳೆರಡೂ..
ಔತನವಾಯ್ತು ನನಗೆ ನಿನ್ನ
ಅಂದವಾದ ಧ್ವನಿಯು..
ಅಃಹಾ ಎಷ್ಟೊಂದು ಮಧುರ..!!
suwichaar.blogspot.in
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou