ಆಧುನಿಕತೆಯಲ್ಲಿ ನಾವು..
ಆಧುನಿಕ ಕಾಲದಲ್ಲಿ
ಪೌರಾಣಿಕತೆಗಿಲ್ಲ ಮಹತ್ವ..
ಕಂಪ್ಯೂಟರ್ ಇಲ್ಲದಿದ್ದರೆ
ಬದುಕೇ ಒಂದು ಜಡತ್ವ..
ಇಂಟರ್ನೆಟ್ ದಾಳಿಗೆ
ಜನಜೀವನವೇ ಅಸ್ತವ್ಯಸ್ತ..
ನವಯುಗದ ಜನರಿಗಿಲ್ಲ
ಪಾಂಡಿತ್ಯದ ತತ್ವ, ಸತ್ವ..
ದಿನದ ಪ್ರತಿ ಗಂಟೆಯಲ್ಲೂ
ತೆರೆದಿಡುವರು ಫೇಸ್ಬುಕ್..
ಓದಲು ಸಮಯವೇ ಇಲ್ಲ
ಸಾಹಿತ್ಯಿಕ ಬುಕ್..
ಮಕ್ಕಳು ನೋಡುವುದೇ ಇಲ್ಲ
ಶಾಲೆಯ ನೋಟ್ಬುಕ್..
ನೆಟ್ ರಿಚಾರ್ಜ್ ಮಾಡಿ
ಖಾಲಿಯಾಗಿಸುವರು ಪಾಸ್ಬುಕ್..
ಜೀವನದ ಹಾದಿಯಲ್ಲಿ
ಇಂಟರ್ನೆಟ್ ಗಳೇ ಸಲಹೆಗಾರ,
ಈ ಯುಗದ ಜನರೆಲ್ಲ
ಕಂಪ್ಯೂಟರ್ ನ ಸರದಾರ..
ಹದಿಹರೆಯದ ಬಾಲಕನಿಗೂ
ವಾಟ್ಸಾಪಿನಲ್ಲಿ ವ್ಯವಹಾರ..
ಹೆಚ್ಚಿನ ಸಮಯವೂ
ಮೊಬೈಲ್ ನಲ್ಲೇ ಹಾಹಾಕಾರ..
ಉತ್ತಮ ಜೀವನಕ್ಕಾಗಿ
ಸುರಿಸಿರಿ ಬೆವರನ್ನು..
ಬದುಕಿನ ನಿರ್ವಹಣೆಗೆ
ನಿಯಂತ್ರಿಸಿರಿ ಮೊಬೈಲನ್ನು..
ಕುಟುಂಬದೊಡನೆ ಬೆರೆತು
ಗಳಿಸಿರಿ ಪ್ರೀತಿಯನ್ನು..
ಇಂಟರ್ನೆಟ್ ಲ್ಲೇ ಕಳೆಯದಿರಿ
ಮೌಲ್ಯಭರಿತ ಸಮಯವನ್ನು..
suwichaar.blogspot.in
♥ಹಕೀಂ.ಪದಡ್ಕ♥
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou