ಬರಹವೆಂಬ ಬದುಕು..

ಬರೆಯುವಿಕೆಯ
ಬಯಸಿದಾಗೆಲ್ಲ
ಬದಿಯಲ್ಲಿ ಕೂತು
ಬರೆಯುವೆ..

ಬರೆಯುವ
ಬರಹಗಳಲ್ಲಿ
ಭಾವನೆಗಳ
ಬಿತ್ತುವೆ..

ಬರಿದಾದ
ಬದುಕಲ್ಲೂ
ಬರಹಗಳು
ಬರಿದಲ್ಲ..

ಬರೆದಷ್ಟೂ
ಬರೆದಷ್ಟೂ
ಬೇಕೆನಿಸುವುದು ಈ
ಬರಹ ಕಾಯಕ..

ಬದುಕನ್ನೇ
ಬೆಳಗಿರುವುದು
ಬರಹಗಳ
ಭಂಡಾರವು..

ಬರಹವೇ
ಬದುಕು
ಬರಹವೇ
ಬೆಳಕು,

ಬಲೆಯೊಳಗೆ
ಬಂಧಿಸಿದರೂ
ಬಿಡಲಾರೆನು
ಬರೆಯುವುದನ್ನು..

suwichaar.blogspot.in

#ಹಕೀಂ.ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!