ಒಂಟಿತನ..
ಬಯಸದೆ ನನಗೆ
ದೊರಕಿದ ಒಂಟಿತನವ
ನಾನೆಂದೂ ಧೂಷಿಸಲಾರೆ..
ಹೃದಯ ಕದ್ದೊಯ್ದು
ವಂಚಿಸಿದ ನಿನ್ನ
ನಾನೆಂದೂ ಕ್ಷಮಿಸಲಾರೆ..
ಪ್ರೇಮ ನಟನೆಯ
ಮಾಡಿದ ನಿನ್ನ
ನಾನೆಂದೂ ನಂಬಲಾರೆ
ಪ್ರೀತಿಯ ಮುಖವಾಡ
ಹೊತ್ತು ನಡೆವ ನಿನ್ನ
ನಾನೆಂದೂ ಬಯಸಲಾರೆ
ಸಾಕಾಯ್ತು ನನಗೀ
ಪ್ರೇಮ ಗಾಯನ
ಮಿಗಿಲಾಯ್ತು ನನಗೀ
ಸ್ನೇಹ ಮಿಲನ
ಬೇಡವಾಗಿದೆ
ಪ್ರಣಯಗೀತೆ…
ವಂಚನೆಯ ಮೂಲವೇ
ಈ ಪ್ರೇಮ ಸಮ್ಮಿಲನ..
suwichaar.blogspot.in
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou