ಅಕ್ಷರ ..
'ಅ'
ಅನ್ನುವ
ಅಕ್ಷರದಿಂದಾಗಿ
ಅರಗಿಸಿಕೊಂಡೆ
ಅಕ್ಷರದಾಹವನ್ನು..
ಅ ದಿಂದ
ಆರಂಭಗೊಂಡು
ಅಃ ದಲ್ಲಿ
ಅಂತ್ಯಗೊಂಡ
ಅಕ್ಷರಮಾಲೆಯಿದು..
ಅಕ್ಷರವನ್ನು
ಅರಿಯಲು
ಅಂದು ನಾ ಪಟ್ಟ
ಆ ಕಷ್ಟಗಳು,
ಅಯ್ಯೋ.. ದೇವರೇ ಬಲ್ಲ.
ಅಂಗನವಾಡಿಯ
ಅಂಗಳದ ವರೆಗೆ
ಅಮ್ಮಾ ನನ್ನ ಬಿಟ್ಟಾಗ,
ಅಲ್ಲಿಂದ ಓಡಿ ಮತ್ತೆ
ಅಮ್ಮನ ನಾ ತಬ್ಬಿಕೊಂಡೆ..
ಅ ಆ ಇ ಈ ಉ ಊ.......
ಅನಕ್ಷರತೆಗೆ
ಅಂತ್ಯವ ಹಾಡಿದ
ಅಕ್ಷರ ಮಾಲೆಯಿದು,
ಅಚ್ಚ ಕನ್ನಡವಿದು..
suwichaar.blogspot.in
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou