ಮುಂಜಾವಿನ ಉಡುಗೊರೆ ..
ಮುಂಜಾವಿನ
ಮುಸುಕಿನಲ್ಲಿ
ಕವಿಯಾಗಿ
ಹೊರಬರಲು,
ಮಂಜಿನ
ಮನಸ್ಸುಗಳು
ಹನಿಯಾಗಿ
ಬೀಳುತಿತ್ತು..
ಕತ್ತಲೆಡೆಯಿರುವ
ಬೆಳಕಲ್ಲಿ
ಕಣ್ತೆರೆದು
ನೋಡುತಿರಲು,
ರಂಗಿನ
ಚಿಟ್ಟೆಯೊಂದು
ಎಡೆಬಿಡದೆ
ಹಾರುತಿತ್ತು.
ತಂಗಾಳಿಯ
ತಂಪಿಗೆ
ಕಿವಿಯನ್ನು
ಮುಚ್ಚಿದ್ದರೂ
ಹಕ್ಕಿಗಳ
ಚಿಲಿಪಿಲಿಯು
ಕಿವಿಯೊಳಗೂ
ಕೇಳಿಸಿತ್ತು..
ಪ್ರಕೃತಿಯ ಈ
ಪ್ರತೀಕಗಳಿಗೆ
ಮನಸನ್ನು
ಅರ್ಪಿಸಿ
ಬರೀ
ದೇಹದೊಂದಿಗೆ
ಮರಳಿ
ಒಳಬಂದೆ..
#ಶುಭ_ಮುಂಜಾನೆ ..
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou