ಶಂಸುಲ್ ಉಲಮಾ
ಉಲಮಾ ಮಹೋನ್ನತರಿಗೆ ತೇಜ
ಸಮಸ್ತವನ್ನು ಮುನ್ನಡೆಸಿದ ರಾಜ
ದೀನೀ ಪ್ರಿಯರಿಗೆ ಘಮಿಸುವ ರೋಜ
ಪ್ರೀತಿಸಿದರು ಇವರನ್ನು ಅಜ್ಮೀರ್ ಖಾಜ
ಕರಾಹತ್ ತ್ಯಜಿಸಿದ ಮಹಾ ವ್ಯಕ್ತಿತ್ವ
ಔಲಿಯಾಗಳಿಗೆ ಬೆಳಕಾದದ್ದೇ ಇವರ ಮಹತ್ವ
ಅಲ್ಲಾಹನ ಇಷ್ಟದಾಸರಾದ ಬಹುತ್ವ
ಬೆಳಗಿತು ಇವರ ಕಾಲದಲ್ಲಿ ಸಮಸ್ತ
ಸಾಧನೆಯಿಂದ ಸಾರ್ಥಕಗೊಂಡ ಜನುಮ
ಅನ್ಯರನ್ನು ದೀನಿಗೆಳೆತಂದ ಮಹಿಮ
ಸರ್ವರಿಗೂ ಆದರ್ಶವಾಯಿತು ಇವರ ಕರ್ಮ
ಅವರೇ ನಮ್ಮ ಗುರು ಶಂಸುಲ್ ಉಲಮ
ತಹ್ಲೀಲಿನೊಂದಿಗೆ ಮುಗಿಸಿದ ಮಾತು
ಸಮಸ್ತಕ್ಕೆ ಒಲಿದು ಬಂದ ಮುತ್ತು
ಅಚ್ಚರಿಗೆ ಕಾರಣವಾದ ಕರಾಮತ್ತು
ಜ್ಞಾನ ಭಂಡಾರವೇ ಇವರ ಸಂಪತ್ತು
ಅಚ್ಚುಳಿದಿದೆ ಶಂಶುಲ್ ಉಲಮಾರ ಚಿತ್ರಣ
ಬೇಕು ನಮಗೆ ಅವರಿಗೆ ಲಭಿಸಿದಂತಹ ಮರಣ
ಸಾರ್ಥಕಗೊಳಿಸಬೇಕು ಮೂರು ದಿನದ ಹರಣ
ಎಂದಿಗೂ ನೆನಪಿಸೋಣ ಅವರ ಜೀವನ..
suwichaar.blogspot.in
#ಹಕೀಂ.ಪದಡ್ಕ
ಮಾಶಾ ಅಲ್ಲಾಹ್
ಪ್ರತ್ಯುತ್ತರಅಳಿಸಿಬಹಳ ಚೆನ್ನಾಗಿದೆ
ಸಮಸ್ತ ಅದುವೇ ಸತ್ಪಥ
ಪ್ರತ್ಯುತ್ತರಅಳಿಸಿ