ಆಹಾರದ ಹಕ್ಕನ್ನೂ ಕಸಿದುಕೊಂಡರು..
ಹುಟ್ಟಿಸಿದ ತಾಯಿಯ ಮರೆತು
ಹಟ್ಟಿಯೊಳಗಿನ ದನವನ್ನು ತಾಯಿಯೆಂದರು,
ಕಟ್ಟುಕಥೆಯನ್ನು ಸೃಷ್ಟಿಸಿದ ಅವರು
ಬಿಕ್ಕಟ್ಟಿನ ವಾತಾವರಣ ನಿರ್ಮಿಸಿದರು..
ದನ ತಿಂದವನನ್ನು ಥಳಿಸಿ, ಕೊಂದು
ಮನದೊಳಗೇ ಖುಷಿಪಟ್ಟರು..
ಜನ ಸಮುದಾಯಕ್ಕೆ ಕೇಡು ಬಗೆದು
ಹಣಕ್ಕಾಗಿ ಧರ್ಮವನ್ನು ಮಾರಲೂ ಸಿದ್ಧರಿದ್ದರು
ಹಿಂದೂ ಧರ್ಮಕ್ಕೇ ಕಳಂಕವಾಯಿತು,
ಎಂದೂ ಕೇಳರಿಯದ ದುರಂತದಿಂದ,
ಇಂದು ಈ ಜನರ ಧರ್ಮಾಂಧತೆಯು
ಎಂದಿಗೂ ಮಾಯವಾಗದು..
ಕೊಲೆಯಲ್ಲೇ ಕಾಲವ ಕಳೆದು
ಕಲೆಯೆಂದು ಭಾವಿಸುವರು..
ಮೊಲೆಹಾಲುಣಿಸಿದ ತಾಯಿಯ ಮೇಲೂ
ಬಲ ಪ್ರಯೋಗಿಸಲು ಅಂಜದವರು..
ಕರುಣೆಯಿಲ್ಲದೆ ಕೊಲ್ಲುವರು..
ಮರಣವನ್ನೂ ನೆನೆಯದೇ..
ಶರಣಾದ ಜೀವಗಳ
ಜೀವನವು ಪಾವನವಾಯ್ತೇನೋ..
suwichaar.blogspot.in
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou