ಮಹಾತ್ಮಾ ಗಾಂಧಿ..
ಭಾರತವೆಂಬ ನಿಧಿಯನ್ನು
ಬಿಳಿಯರ ಕರದಿಂದ
ಬಿಡಿಸಿ ಮರಳಿ ಪಡೆಯಲು
ಭರದ ಹೋರಾಟವ ಮಾಡಿದರು
ಬಾಪೂಜಿ ತಾತರು..
ಭಾರತವು ಮುಕ್ತವಾಯಿತು
ಭರಪೂರ ಸಮರದ ಫಲವಾಗಿ
ಬಿರಿದು ಚೀರಿದ ಸ್ವತಂತ್ರವು
ಬಯಲುಗೊಳಿಸಿತು ಇಂದು
ಬರಿಯ ಗಾಂಧಿ ನೋಟನ್ನು..
ಬಯಕೆಗಳೆಲ್ಲವೂ ನಮಗೆ
ಬರಿದಾದ ನೋಟಿಗಾಗಿ
ಬಟ್ಟೆಗಾಗಿ, ಹೊಟ್ಟೆಗಾಗಿ..
ಬೆರೆಯುವುದಿಲ್ಲ ನಾವಿಂದು
ಬಾಪೂಜಿಯ ಆದರ್ಶದೊಳು..
ಬದುಕಿನ ಕೊನೆವರೆಗೂ
ಭರತ ಭೂಮಿಗಾಗಿ
ಬೆಂದು ದುಡಿದು ಮಡಿದ
ಬಾಪೂಜಿ ತಾತನ
ಬರ್ತ್ ಡೇ ಇಂದು..
ಬರೆದ ಅಕ್ಷರಗಳು
ಬಿರಿದ ಭಾವನೆಗಳು
ಬಾಪೂಜಿಯವರೊಂದಿಗಿನ ಸ್ನೇಹ
ಬಂಧವನ್ನು ಬಲಪಡಿಸೀತು,
ಬಿಂದುಗಳೆರಡರ ಜೋಡಣೆಯಂತೆ..
ಭಾವೈಕ್ಯತೆಯ ಕೈಗನ್ನಡಿಯಾಗಿ
ಭಾರತೀಯರ ಮನದೊಳಗೆ
ಬಂಧಿಸಲ್ಪಟ್ಟಿರುವ
ಬಾಪೂಜಿ ಮಹಾತ್ಮರಿಗೆ
ಭಾವಪೂರ್ಣ ನಮನಗಳು..
#ಹಕೀಂ.ಪದಡ್ಕ
suwichaar.blogspot.in
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou