ಸಾಕಾಯ್ತು ಈ ಸ್ನೇಹ ಸಲ್ಲಾಪ..

ಸಮುದ್ರ ಕಿನಾರೆಯಲ್ಲಿ
ಸಹಪಾಠಿಗಳೊಡನೆ ಕೂತಿರಲು,
ಸನಿಹದಲ್ಲೇ ಇದ್ದ ನೀ
ಸೆಳೆದೆ ನನ್ನ ಮನಸ್ಸನ್ನು ..

ಸನ್ನೆಯಿಂದ ಆರಂಭಗೊಂಡ
ಸ್ನೇಹ ಬಾಂಧವ್ಯವು
ಸಾವು ಬರುವವರೆಗೂ
ಸಿಹಿಯಾಗಿರಬೇಕೆಂಬ ಬಯಕೆಯಿತ್ತು,

ಸುಂದರ ಮುಖದಲ್ಲಿ
ಸಿಟ್ಟನ್ನು ಕಂಡಾಗಲೂ
ಸುಂದರವಾಗಿತ್ತು ಅಂದು,
ಸೌಂದರ್ಯವೂ ಇಮ್ಮಡಿಯಾಗಿತ್ತು..

ಸ್ನೇಹದ ಕಡಲಲ್ಲಿ
ಸೇರಿ ಒಂದಾದಾಗ
ಸೊರಗದ ಭಾವನೆಯಲ್ಲಿ
ಸವಿಯಾದ ಅನುಭವಗಳಿತ್ತು..

ಸಿರಿತನವ ಬಯಸದ ಎನಗೆ
ಸ್ನೇಹದ ಮೂಟೆಯಿಂದ
ಸಿರಿವಂತಗೊಳಿಸಿದ ನೀ
ಸರಿದು ನಿಂತೆಯಾ ಈಗ..

ಸಂತಸವ ಹಂಚಲೆಂದು
ಸೆರಗ ಹಿಡಿದು ಬಂದವಳು
ಸಮಯವ ವ್ಯಯಿಸಲು
ಸ್ನೇಹದ ನೆಪ ಹೂಡಿದಳೇ..

ಸಾಕು ನನಗೀ
ಸ್ನೇಹ ಸಲ್ಲಾಪ..
ಸುಂದರ ಬದುಕನ್ನು
ಸಾಯಿಸುವ ಕೂಪ..

ಸುದೃಢ ದೇಹದೊಳು
ಸಜ್ಜನತೆಯ ಮನವಿದ್ದೊಡೆ,
ಸಮಯವನು ನಶಿಸುವ
ಸ್ನೇಹದ ಅಗತ್ಯವೇಕೆ..?

suwichaar.blogspot.in

#ಹಕೀಂ ಪದಡ್ಕ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!