ವಿರಹಗೀತೆ..!
ಅವಳಿಗಾಗಿ ಒಂದಷ್ಟು,
ಸಾಲುಗಳನ್ನು ಬರೆದು,
ಗಲ್ಲಿಗೇರಿಸಬೇಕು..
ಕರೆಯುವವರು ಕರೆಯಿರಿ,
ಕೊಲೆಗಾರನೆಂದು...
ಅವಳ ನೆನಪುಗಳನ್ನೆಲ್ಲ,
ಬಟ್ಟೆಕಳಚಿ ಬೆತ್ತಲೆಯಾಗಿ,
ಮೆರವಣಿಗೆಗಿಡಬೇಕು..
ಹೆಸರಿಸುವವರು ಹೆಸರಿಸಲಿ,
ವಿಕೃತ ಕಾಮಿಯೆಂದು..
ಅವಳ ಗೋರಿಯ,
ಬಳಿ ನಿಂತು ನನಗೆ,
ಬಿಕ್ಕಿ ಬಿಕ್ಕಿ ಅಳಬೇಕು..
ಶಿಳ್ಳೆ ಹೊಡೆದು ಕೂಗಲಿ ಅವರು,
ನಾನು ವಿರಹಿಯೆಂದು..
ಅವಳಿಗೆ ನಾನು ಕೊಟ್ಟ,
ಪ್ರೀತಿಯ ಮರಳಿ ಪಡೆಯಲು,
ಉಪವಾಸ ಕೂರಬೇಕು..
ಬೊಟ್ಟಿಡುವವರು ಇಡಲಿ,
ನನ್ನನ್ನು ವಂಚಕನೆಂದು..
ಅವಳ ಕೈ ಹಿಡಿದು ಅಂದು,
ವಿಹಾರಕ್ಕೆ ಹೋದ ಕಡಲ ತೀರಕ್ಕೆ,
ಮತ್ತೊಮ್ಮೆ ಹೋಗಬೇಕು..
ಸಮುದ್ರ ಅತ್ತರೂ ಸರಿ,
ಅವಳಿಲ್ಲದ ಕಾರಣಕ್ಕೆ...
#ತೂತು ಬಿದ್ದ ಜೋಪಡಿಯಲ್ಲಿ..
✍ ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou