ವೇಗತೆ..

ಗಡಿಯಾದ ಮುಳ್ಳುಗಳು,
ವೇಗದಲ್ಲಿ ಚಲಿಸುತಿದೆ..
ಗಂಟೆಗಳು ನಿಮಿಷದಂತೆ,
ನಿಮಿಷಗಳು ಸೆಕೆಂಡುಗಳಂತೆ,
ಸಾಗಿ ಸಾಯುತಿದೆ..

ಈಗೀಗ ಸೂರ್ಯನೂ,
ಬೇಗನೇ ಏಳುತ್ತಿದ್ದಾನೆ..
ಸಂಜೆಯಾಗುವ ಮೊದಲೇ,
ಮುಳುಗುತ್ತಿದ್ದಾನೆ..

ನಿನ್ನೆ ಕಂಡವರಲ್ಲಿ,
ಹಲವರು ಇವತ್ತು,
ಸಮಾಧಿ ಸೇರಿದ್ದಾರೆ..
ಜಗತ್ತು ಮತ್ತೆ ಮತ್ತೆ,
ಕಿರಿದಾಗುತ್ತಿದೆ..

ಇದರ ಚಿಂತೆಯಿಲ್ಲದೇ,
ಅವನು ಮಾತ್ರ,
ಅಲಾರಾಂ ಇಟ್ಟು,
ನಿದ್ದೆಗೆ ಜಾರಿದ್ದಾನೆ..
ನಾಳೆ ಮುಂಜಾನೆ,
ಏಳುವೆನೆಂದು ನಂಬಿದ್ದಾನೆ..

#ತೂತು ಬಿದ್ದ ಜೋಪಡಿಯಲ್ಲಿ..

- ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!