ಸಮುದ್ರ ಅತ್ತಿದೆ..?
ಭೂಮಿ ಬತ್ತಿದೆ..
ದಾಹದ ಕ್ರೌರ್ಯಕ್ಕೆ,
ಓಣಗಿ ಹೋದ ಅವನ,
ಆ ಗಂಟಲಿನಂತೆ...
ಸಮುದ್ರವೂ ಅತ್ತಿದೆ..
ತುತ್ತು ಅನ್ನಕ್ಕಾಗಿ
ಹುಡುಕುವ ಅವನ,
ಆ ಕಣ್ಣುಗಳಂತೆ..
ಜಗತ್ತು ಸತ್ತಿದೆ..
ಬದುಕಿಗೆ ಬಣ್ಣವಿಡಲಾಗದೆ,
ಕಳೆದುಕೊಂಡ ತನ್ನ,
ಆತ್ಮ ವಿಶ್ವಾಸದಂತೆ..
ಕಾಲವು ಹತ್ತಿದೆ..
ಬರಿದ ಹೊಟ್ಟೆಯಲ್ಲಿ,
ದಿನದಿಂದ ದಿನಕ್ಕೆ,
ಶಕ್ತವಾಗುವ ಹಸಿವಿನಂತೆ..
ಹೃದಯ ಹೊತ್ತಿದೆ..
ಬೆಂಕಿಯಲ್ಲಿ ಕಾದು,
ಕರಗಿಕೊಂಡಿರುವ,
ಕಬ್ಬಿಣದ ತುಂಡಿನಂತೆ..
#ತೂತು ಬಿದ್ದ ಜೋಪಡಿಯಲ್ಲಿ..
-> ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou