ಕಾಡು ದಾರಿಯಲ್ಲಿ..

ಕಾಡಿನ ನಡುವಿನ ಕಗ್ಗತ್ತಲಲ್ಲಿ,
ಅನಿವಾರ್ಯವಾದ ನನ್ನ ನಡೆತ..
ಅಂಕು-ಡೊಂಕಿನ ದಾರಿಯಲ್ಲಿ,
ನಡೆದಾಗ ಹೆಚ್ಚಿತ್ತು ಹೃದಯ ಬಡಿತ..!

ಈ ಇರುಳಲ್ಲಿ ಕಾಡಮಧ್ಯೆ,
ಚೀರುವ ಜೀರುಂಡೆಗಳ ಧ್ವನಿಯು,
ಕಾಡೊಳಗೆ ಯಾರೋ...,
ಕೂವಿಡುವಂತೆ ಕೇಳಿಸಿತ್ತು..

ಬಿದ್ದಿರುವ ಮರದೆಲೆಗಳಡಿಯಲ್ಲಿ,
ತೆವಳುತ್ತಿರುವ ಕೇರೆ ಹಾವುಗಳು,
ಹೂಂಕರಿಸುವ ಸದ್ದಿನೊಡನೆ,
ಭಯ ನನ್ನೊಳಗೆ ಅವಿತಿತ್ತು..

ಬೀಸುವ ತಂಗಾಳಿಗೆ ಅಲುಗಾಡುವ,
ಮರದ ರೆಂಬೆಗಳು ನನ್ನ ಕಣ್ಣಿಗೆ,
ಭೀಕರ ರೂಪದಲ್ಲಿ ಗೋಚರಿಸಿತ್ತು..
ಧೈರ್ಯ ದೂರವಾಗುತ್ತಲಿತ್ತು..

ಕಾಡುಗಳ ನಡುವಿನ ಹರಕು ದಾರಿಯಲಿ,
ಕಾಲುಗಳು ಗುಂಡಿಗೆ ಬಿದ್ದುಕೊಂಡಾಗ..
ಅಬ್ಬಾ... ಯಾರೋ ನನ್ನನ್ನು,
ಬಾವಿಗೆ ದೂಡುತ್ತಿರುವ ಅನುಭವ..!!

ಈ ರಾತ್ರಿಯಲ್ಲಿ ಕಾಡಿನ ನಡುವೆ
ಮೈಲುದೂರದ ನನ್ನ ಪಯಣ..!
ಹೆಜ್ಜೆಯ ವೇಗಕ್ಕೇ ಸರಿದೂಗಿ,
ಬಡಿಯುತ್ತಲಿತ್ತು ಹೃದಯದೊಳಗಣ..!!

#ತೂತು ಬಿದ್ದ ಜೋಪಡಿಯಲ್ಲಿ..

-->
ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!