ಮುಖವಾಡ..
ಮುಖವಾಡ ಹುಡುಕಿ ಹೊರಟಿರುವೆ..
ಹೊಟ್ಟೆ ಹರಿಯುವ ಹಸಿವಿಗೆ,
ತುಂಬಿರುವ ಬಸಿರೊಂದರ,
ಮುಖವಾಡ ಬೇಕಿದೆ..
ಬತ್ತಿರುವ ಗಂಟಲೊಂದಕ್ಕೆ,
ಕಡಲೊಂದರ ಮುಖವಾಡ..
ಬೆತ್ತಲೆಯ ಆ ಮಗು ದೇಹ,
ಮುಚ್ಚುವಂತಹ ಮುಖವಾಡ..
ಪಾಳು ಗುಡಿಸಲೊಂದಕ್ಕೆ,
ಟೆರಸಿನ ಮಾಳಿಗೆಯ ಮುಖವಾಡ..
ಬುಡ ಕತ್ತಲಿನ ದೀಪವೊಂದಕ್ಕೆ,
ಹೈ ವೋಲ್ಟ್ ಬಲ್ಬಿನ ಮುಖವಾಡ..
ಮುಖವಾಡ ಹುಡುಕಿ ಹೊರಟಿರುವೆ..,
ಇಲ್ಲದ ಹಲವುಗಳಿಗೆ,
ಇರುವುದರ ಮುಖವಾಡವಿಟ್ಟು,
ಜನರೆಡೆಯಲ್ಲಿ ಶೋಭಿಸಲು..
ಸತ್ಯವನ್ನು ಮರೆಮಾಚಲು..
#ತೂತು ಬಿದ್ದ ಜೋಪಡಿಯಲ್ಲಿ..
-> ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou