ಅಪ್ಪನ ಹಳೆಯ ಸ್ಕೂಟರು..!

ಅಪ್ಪನ ಸ್ಕೂಟರಲ್ಲಿ ಕೂರುವುದೆಂದರೆ,
ನನಗೆ ಇನ್ನಿಲ್ಲದ ಖುಷಿ...
ನನಗೆ ಮಾತ್ರ ಅಲ್ಲ,
ಪಕ್ಕದಮನೆಯ ಥೋಮಸನಿಗೂ...
ಮತ್ತೊಬ್ಬ ಸ್ನೇಹಿತ ಕಿಶೋರನಿಗೂ...

ಥೋಮಸ್, ಕಿಶೋರ್ ಮತ್ತು ಹಕೀಂ,
ನಾವು ಮೂರು ಜನ ಗೆಳೆಯರು,
ಜನುಮದ ಜೀವನಾಡಿ....
ಸ್ಕೂಟರೇ ನಮಗೆ ರೈಲುಗಾಡಿ...

ಮಾಲ್, ಟಾಕೀಸುಗಳನ್ನು ಸುತ್ತುಹಾಕಲು,
ನಮಗೆ ಅಂದು ಇನೋವಾ ಕಾರಿರಲಿಲ್ಲ...
ಅಪ್ಪ ಲೋನಲ್ಲಿ ತೆಗೆದಿರಿಸಿದ್ದ,
ಆ ಎರಡು ಗಾಲಿಯ ವಾಹನದಲ್ಲೇ ಪಯಣ‌..

ಸ್ಕೂಟರಿಗೆ ತೆಗೆದ ಲೋನನ್ನು,
ಬಡ್ಡಿ ಸಮೇತ ಕಟ್ಟಿಯಾಗಿತ್ತು ಅಪ್ಪನಿಗೆ...
ಅದರೊಡನೆ ಆಯಸ್ಸಿನ ಮುಕ್ಕಾಲು,
ಭಾಗವನ್ನೂ ಕಳೆದುಕೊಂಡಿದ್ದರು.‌‌.

ನಾವು ಮೂರು ಜನ ಗೆಳೆಯರು,
ಇದ್ಯಾವುದರ ಅರಿವಿಲ್ಲದೇ...
ಸ್ಕೂಟರಿನೊಡನೆಯ ಸುತ್ತಾಟದಲ್ಲೇ,
ಜೀವನವನ್ನು ಮುಗಿಸುತ್ತಲಿದ್ದೆವು..

ಲಾಭ-ನಷ್ಟಗಳ ಸಮ ಹಂಚಿಕೆಯಿರುವ,
ಅದರ ಇತಿಹಾಸವೇನೋ ತಕ್ಕಮಟ್ಟಿಗೆ ಚೆನ್ನಾಗಿತ್ತು..
ನಮ್ಮೊಳಗಿನ ಗೆಳೆತನದ ಬದುಕಲ್ಲಾದರೆ,
ಕೂಡಲಾರದಷ್ಟು ಬಿರುಕು ಮೂಡಿಯಾಗಿತ್ತು..

ಕಾರಣವಿಷ್ಟೇ..
ನಾವು ಒಂದೂವರೆ ಅಡಿ ಎತ್ತರಕ್ಕೆ ಬೆಳೆದಿದ್ದು..
ಮನದೊಳಗೆ ಯಾರೋ ಧರ್ಮದ ಗಾಳಿ ಹರಿಸಿದ್ದು..
ಹಿಂದು, ಕ್ರೈಸ್ತ ಮತ್ತು ಮುಸ್ಲಿಂ ಎಂದು,
ನಮ್ಮನ್ನು ನಾವೇ ಬೇರ್ಪಡಿಸಿದ್ದು...

ನಾನಿನ್ನೂ ಅದೇ ಹಳೆಯ ಅಪ್ಪನ ಸ್ಕೂಟರಲ್ಲಿ,
ಹೊಸತೆಂದು ಭಾವಿಸುವ ಹೃದಯದೊಂದಿಗೆ,
ಸಂಚಾರವನ್ನು ಮುಂದುವರೆಸಿರುವೆ....
ಹಳೆಯ ನೆನಪುಗಳನ್ನೆಲ್ಲಾ ಬಿಸಾಕುತ್ತಾ...

ಸ್ಕೂಟರು ಹಳತಾಗಿದೆ..ನಮ್ಮ ಕರಿದ ಹೃದಯದಂತೆ.‌.
ಇಂಜಿನು ವೀಕಾಗಿ ಸ್ಕೂಟರು ಹೊಗೆ ಬಿಡುತ್ತಿದ್ದರೆ,
ಬ್ರೈನು ವೀಕಾಗಿ ನಾವು ಹಗೆ ಬಿಡುತ್ತಿದ್ದೇವೆ...
ನಮ್ಮೊಳಗಿನ ಪ್ರೀತಿಗೇ ಮೋಸ ಬಗೆಯುತ್ತಾ...,
ಮತ್ತೆ ಸ್ಕೂಟರಿನಲ್ಲಿ ಪಯಣ... ದೂರ ದೂರ...
ಸೌಹಾರ್ದತೆಯೂ ಹಾಗೇ.. ಎಲ್ಲೋ ಹೋಗಿದೆ...

#ತೂತು ಬಿದ್ದ ಜೋಪಡಿಯಲ್ಲಿ..

✍ ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!