'ಕ'ವಿಯ 'ಕ'ವನ..

ಕವಿಯೊಬ್ಬನಿಗೆ ಕಣ್ಣೀರೂ
ಕವನವಾಗಿ ಕಂಡಿತು..
ಕಾಗದದಲ್ಲಿ ಕವನಗಳೇ
ಕನವರಿಸಿ ಕುಳಿತಿತ್ತು...

ಕಾಣುವ ಕನಸುಗಳೂ
ಕವಿಗೆ ಕವನವಾಯ್ತು..
ಕರುಳು ಕಿತ್ತೆಸೆಯುವ
ಕಷ್ಟಗಳೂ ಕವನವಾಗಿತ್ತು..

ಕವನ, ಕಥೆಗಳ ಕಾಮುಕನಾಗಿ
ಕವಿಯೊಬ್ಬನು ಕಾಣುವನು..
ಕಾಗದಗಳು ಕೆಲವು
ಕಸದೊಟ್ಟಿಗೆ ಕೂಡಿತ್ತು..

ಕಂಡ ಕಾಲವೆಲ್ಲವೂ
ಕವಿಯ ಕಾಗದದಲ್ಲಿ
ಕವನದ ಕಸ್ತೂರಿಯಾಗಿ
ಕಾವ್ಯಕ್ಕೆ ಕಾರಣವಾಯ್ತು..

ಕವನದ ಕಂದನು
ಕರ ಕೂಡಿಸಿದ್ದೂ
ಕಾಣುಗರಿಗೆ ಕಂಡದ್ದು
ಕವನವಾಗಿಯಾಗಿತ್ತು..

ಕವಿಗೆ ಕಂಡದ್ದೆಲ್ಲವೂ
ಕಾವ್ಯವಾಗಿ ಕುಣಿಯಿತು..
ಕಾಗದಗಳು ಕವಿಯ
ಕೈಯೊಂದಿಗೆ ಕೂಡಿತ್ತು..

suwichaar.blogspot.in

✍ ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!