ಯಶಸ್ಸಿನ ಎರಡು ದಾರಿಗಳು..

ಜೀವನದ ಯಶಸ್ಸಿಗೆ ಮುಖ್ಯವಾಗಿ ಎರಡು ದಾರಿಗಳು..

1) ಹಿರಿಯರು/ಹಿತೈಷಿಗಳು ತೋರಿಕೊಟ್ಟ ಮಹತ್ವದ ದಾರಿ..

=> ಇದು ನಮಗೆ ಚಲಿಸಬೇಕಾದ ಪಥವನ್ನು ಹಾಗೂ ರೀತಿಯನ್ನು ತೋರಿಸಿಕೊಡುತ್ತದೆ. ಕೆಲವೊಂದು ತಮ್ಮದೇ ಅನುಭವದಲ್ಲಿ ಸಂಭ್ರಮಿಸಿದ ಅಥವಾ ಇನ್ನೊಬ್ಬನ ಸಾಧನೆಯ ಹಿಂದಿನ ದಾರಿಯಾಗಿರಬಹುದು ಇದು. ಸದಾ ಒಳಿತನ್ನೇ ಬಯಸುವ ನಮ್ಮ ಹಿರಿಯರು, ಮಾರ್ಗದರ್ಶಕರು ಅಥವಾ ಮಿತ್ರ-ಬಂಧುಗಳು ನಮ್ಮ ಸಾಧನೆಯಲ್ಲಿ ಯಶಸ್ವಿತನ ಕಾಣಲು ಸುಲಭ/ಕಷ್ಟದ ಪಥವನ್ನು ಕಾಣಿಸಿ ಕೊಡುತ್ತಾರೆ.  ಸಾಧಕನು ಈ ದಾರಿಯನ್ನು ಆರಿಸುವುದರಲ್ಲಿ ತಪ್ಲಿಲ್ಲ. ಹಿತವನ್ನು ಬಯಸುವವರು ಅಥವಾ ನಂಬಲರ್ಹವಾದವರು ಇಂತಹ ದಾರಿ ತೋರಿಸಿಕೊಟ್ಟರೆ ಅದನ್ನು ಹಿಂಬಾಲಿಸಬಹುದು.. ಹಾಗೂ ಸಾಧನೆಯನ್ನು ಸಾಧಿಸಬಹುದು..

2) ನಾವೇ ಸ್ವತಃ ಕಂಡುಕೊಂಡ ದಾರಿ..

=> ಇದು ಕೂಡ ಸಾಧಿಸಲು ಹೊರಟು ನಿಂತ ಸಾಧಕನಿಗೆ ಯಶಸ್ಸಿನೆಡೆಗೆ ತಲುಪಲು ಇರುವ ದಾರಿ. ನಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯ, ಧೈರ್ಯ ಎಲ್ಲವನ್ನೂ ಅರಿತು, ಆತ್ಮವಿಶ್ವಾಸದೊಂದಿಗೆ ಗುರಿಯೆಡೆಗೆ ಚಲಿಸಲು ಉತ್ತಮ ಅವಕಾಶ. ನಮ್ಮ ಗುರಿಯನ್ನು ದೂರದಿಂದಲೇ ಗುರುತಿಸಿ ಈ ದಾರಿಯು ನಮ್ಮ ಸಾಧನೆಗೆ ಸ್ಪೂರ್ತಿ ತುಂಬಬಹುದು. ಅಲ್ಲದೇ, ನಮ್ಮೊಳಗಿನ ಭಯ, ದೌರ್ಬಲ್ಯ ಎಲ್ಲವನ್ನೂ ಬದಿಗೆ ಸರಿಸಿ, ಸಾಧನೆಯನ್ನೇ ಕೇಂದ್ರೀಕರಿಸಲು ನಾವು ಕಂಡುಕೊಂಡಂತಹ ಉತ್ತಮಂವಾದ ದಾರಿ ಸುಲಭವಾಗಿರಬಹುದು.. ಸಾಧನೆಯೂ ನಮ್ಮ ಹೆಜ್ಜೆಗಳೊಂದಿಗೆ ಹತ್ತಿರವಾಗಿ ಬರಬಹುದು..

--> ಮೇಲೆ ತಿಳಿಸಲ್ಪಟ್ಟ ಎರಡು ದಾರಿಗಳಲ್ಲಿ ಎರಡೂ ಉತ್ತಮವಾಗಿದ್ದರೂ ನಾನು ಕಂಡುಕೊಂಡ ಪ್ರಕಾರ 2ನೇ ದಾರಿಯೇ ಉತ್ತಮ. ಯಾಕಂದರೆ, ಮೊದಲ ದಾರಿ (ಇತರರು ತೋರಿಕೊಟ್ಟದ್ದು) ಎಲ್ಲಾ ಸಂದರ್ಭಗಳಲ್ಲೂ ಉತ್ತಮವಾಗಿರಬೇಕೆಂದಿಲ್ಲ. ಇಲ್ಲಿ ನಮಗೆ ದಾರಿ ತೋರಿಸುವವರು, ಸ್ವತಃ ಅನುಭವವನ್ನು ಪಡೆಯದೆಯೇ ಇನ್ನೊಬ್ಬನ ಸಾಧನೆಯನ್ನು ಗಮನಿಸಿ, ಆತನು ಚಲಿಸಿದ ದಾರಿಯನ್ನು ನಮಗೆ ಹೇಳಿಕೊಡಬಹುದು. ಅಥವಾ ತಮಗೆ ಅದು ಉತ್ತಮ ಅಂತ ತೋಚಿದ್ದನ್ನು ಹೇಳಿರಬಹುದು. ಇನ್ನೊಬ್ಬನಿಗೆ ಸಾಧ್ಯವಾದುದೆಲ್ಲಾ ನಮಗೆ ಸಾಧ್ಯವಾಗಬೇಕೆಂದಿಲ್ಲ. ಕೆಲವೊಮ್ಮೆ ಅಂತಹ ದಾರಿ ನಮ್ಮನ್ನು ಪಾತಾಳಕ್ಕೆ ಎಳೆದು ಹಾಕಲೂ ಬಹುದು. ಕೆಲವೊಮ್ಮೆ ಗುರಿ ತಲುಪಲೂ ಬಹುದು..

ಆದರೆ, 2ನೇ ದಾರಿ ಹಾಗಲ್ಲ.  ನಾವು ನಮ್ಮ ಸಾಧನೆಗಾಗಿ, ನಮ್ಮ ಸಾಮರ್ಥ್ಯವನ್ನು ಸ್ವತಃ ಅಳೆದು, ನನಗೆ ಇದು ಸಾಧ್ಯ ಎಂಬ ದೃಢ ವಿಶ್ವಾಸ ಹಾಗೂ ಭರವಸೆಯೊಂದಿಗೆ ಮುನ್ನಡೆಯುವಾಗ ಯಶಸ್ಸು ಕೈಗೆಟಕುವಲ್ಲೇ ಇರುತ್ತದೆ. ಇಲ್ಲಿ ನಾವು ಚಲಿಸುವ ದಾರಿಯನ್ನು ಯಾರಾದರೂ ಅವಮಾನಿಸಿದರೆ ಅಥವಾ ಹೀಯಾಳಿಸಿದರೆ ನಮಗೆ ಇನ್ನಷ್ಟು ಹಠ ಬಂದು ನಾನು ಸಾಧಿಸಿಯೇ ತೀರುತ್ತೇನೆಂಬ ದೃಢ ಸಂಕಲ್ಪ ನಮ್ಮೊಳಗೆ ಮೂಡುತ್ತದೆ. ಇದರಿಂದ ಸಾಧನೆ ಅತ್ಯಂತ ಸುಲಭವಾಗಿ ಸಾಧ್ಯವಾಗುತ್ತದೆ. ಎಂಬುದು ನನ್ನ ಅಭಿಪ್ರಾಯ ..
ಎಲ್ಲರ ಅಭಿಪ್ರಾಯ ಒಂದೇ ಆಗಿರಬೇಕೆಂದಿಲ್ಲ.. ಆದರೂ ನನಗೆ ಒಂದಷ್ಟು ಅನುಭವ ದೊರೆತಿರುವುದರಿಂದ ಇಲ್ಲಿ ತಿಳಿಸುತ್ತಿದ್ದೇನೆ..

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!