ಹಸಿವು ..

ಹಸಿವಿನಿಂದ ಬೆಂದಿದ್ದ ಹೊಟ್ಟೆ
ಹಿಟ್ಟನ್ನು ಹುಡುಕುತ್ತಲಿತ್ತು..
ಹೊತ್ತಿನ ಊಟಕ್ಕೆ ತುತ್ತು ಸಿಗದೇ
ಹೊಟ್ಟೆ ಗುರುಗುಟ್ಟುತ್ತಲಿತ್ತು..

ಹಣವಿದ್ದ ಪುಣ್ಯವಂತರೆಲ್ಲರೂ
ಹೋಟೆಲೊಳಗೆ ಉಣ್ಣುತ್ತಿದ್ದರೆ,
ಹಸಿದು ಕಂಗಾಲಾಗಿದ್ದ ಅವನು
ಹಳಸಿದ ತಿಪ್ಪೆಯಾಹಾರ ಹೆಕ್ಕುತ್ತಿದ್ದ..

ಹರಿದ ಹಳೆಯ ಬಟ್ಟೆಯನುಟ್ಟು
ಹಾದಿಯಲ್ಲಿ ಕೈ ಚಾಚುತ್ತಿದ್ದ..
ಹೊತ್ತು ತುತ್ತಿಗಾಗುವಷ್ಟೂ
ಹಣ ಸಿಗದೇ ಹೈರಾನಾಗುತ್ತಿದ್ದ..

ಹೆಚ್ಚಿದ ಆಹಾರಗಳೆಲ್ಲವೂ
ಹತ್ತಿರದ ತಪ್ಪೆ ಪಾಲಾಗುತ್ತಿತ್ತು..
ಹಸಿದವರಿಗೆ ನೀಡಬೇಕೆಂಬ
ಹಂಬಲ ಅವರಿಗಿಲ್ಲವಾಗಿತ್ತು..

ಹಸಿವು ತಡೆಯಲಾರದೇ ಅಲ್ಲಿ
ಹೆತ್ತ ಕೂಸೊಂದು ಕಿರುಚುತ್ತಿತ್ತು..
ಹೆತ್ತವ್ವಳು ತನ್ನ ಮಗುವನ್ನು
ಹಣೆ ಸವರಿ ಸಮಾಧಾನಿಸುತ್ತಿತ್ತು..

ಹಸಿವಿನಿಂದ ಬದುಕುವುದೇ
ಹಣೆಬರಹ ಇವರದ್ದಾಗಿತ್ತು..
ಹಸಿವು ತಡೆಯುವ ಶಕ್ತಿ
ಹುದುಗಿ ಹೋಗಿತ್ತು..

ಹೆಜ್ಜೆ ಹೆಜ್ಜೆಗೂ ಆತನಿಗೆ
ಹಸಿವು ಸವಾಲಾಗಿತ್ತು..
ಹುಟ್ಟು ನೀಡಿದ ಒಡೆಯನ
ಹಸ್ತಸಹಾಯವನ್ನು ಬಯಸಿತ್ತು..

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!