ಮಾತು ಬಾರದೇ ಹೋದರೆ..?

ಮಾತು ಆಡಿದರೆ ಹೋಯಿತು..
ಮುತ್ತು ಒಡೆದರೆ ಹೋಯಿತು..
ಮಾತನಾಡಲು ಬಾರದೇ ಇದ್ದರೆ,
ಜೀವನ ಬರಿದಾಗಿ ಹೋದೀತು..

ಮಾತಿನಿಂದಲೇ ಸರ್ವಸ್ವ ಗೆಲ್ಲಬಹುದು..
ಮಾತನಾಡಿಯೇ ಶೂನ್ಯನೂ ಆಗಬಹುದು..
ಮಾತಿನೊಡಗಿರುವ ಎಚ್ಚರಿಕೆಯೇ
ಭವಿಷ್ಯ ನಿರ್ಧಾರ ಮಾಡಬಹುದು..

ಮಾನವನೊಬ್ಬನೇ ಇಲ್ಲಿ
ಮಾತು ಬಲ್ಲ ಜಂತು..
ಮೂಕ ಪ್ರಾಣಿಗಳವು
ಉಳಿದಿರುವುದೆಲ್ಲವೂ..

ಮಾತು ಹಿತವಾಗಿರಬೇಕು..
ಮಿತಿಯಲ್ಲಿ ಇರಲೇಬೇಕು..
ಮನ ಹೇಳಿದ್ದನೆಲ್ಲಾ ಬಿಚ್ಚಿ ಹೇಳಿದರೆ,
ಅಪಾಯವನ್ನು ಎದುರಿಸಲೇಬೇಕು ..

ಮಾತು ಬಾರದೇ ಹೋದರೆ..?
ಮನುಜಾ ಚಿಂತಿಸು ನೀನೊಮ್ಮೆ..
ಮನುಕುಲಕ್ಕೆ ವರವಲ್ಲದೆ ಇದು
ಬೇರೇನೂ ಅಲ್ಲ...ಅಲ್ಲ...

ಮಾತು ಬಾರದೆ ಅದೆಷ್ಟೋ
ಮಂದಿ ಸಹಿಸಿ ಕುಳಿತಿದ್ದಾರೆ..!!
ಮಾತು ಕರುಣಿಸಿದ ಅಲ್ಲಾಹನಿಗೆ
ನಾವೆಷ್ಟು ನಮಿಸಿದ್ದೇವೆ..?

ಮಾತಿನಿಂದಲೇ ಎಲ್ಲವೂ ನಡೆಯುವುದಿಂದು..
ಮಾತಿಲ್ಲದೇ ಇರುವ ಬದುಕು ಶೂನ್ಯವೇ ಸರಿ..
ಮಾತನಾಡದೇ ನಮ್ಮ ಭಾವನೆಗಳನ್ನು
ಹಂಚುವುದಾದರೂ ಹೇಗೆ ಯೋಚಿಸು..

ಮಾತು ನೀಡಿದ ಜಗದೊಡೆಯ ಅಲ್ಲಾಹನಿಗೆ,
ಮನಬಿಚ್ಚಿ ಸ್ತುತಿಗಳನ್ನು ಅರ್ಪಿಸೋಣ..
ಮಾನವ ಕುಲದಲ್ಲಿ ಜನಿಸಿ ಬಂದಿರುವುದಕ್ಕೆ
ಸಂತೋಷವನ್ನು ಆನಂದಿಸೋಣ..

ಮರಳಿ ಮಣ್ಣಿಗೆ ಸೇರುವ
ಮೊದಲು ಹಿತವಾಗಿ ನಾವು
ಮಾತನಾಡೋಣ.. ಬಾ..
ಅಲ್ಲಾಹನ ಇಷ್ಟದಾಸರಾಗೋಣ..

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!